ADVERTISEMENT

ರಾಹುಲ್ ಗಾಂಧಿ ಎಂಬ ಹೆಸರಿನ ಯುವಕನಿಗೆ ತಲೆನೋವಾದ 'ಗಾಂಧಿ' ಸರ್‌ನೇಮ್

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 10:35 IST
Last Updated 31 ಜುಲೈ 2019, 10:35 IST
   

ಇಂದೋರ್:ಕಾಂಗ್ರೆಸ್‌ ನಾಯಕರಾಹುಲ್ಗಾಂಧಿ ಪಕ್ಷದಆಂತರಿಕಸಮಸ್ಯೆಗಳಬಗೆಹರಿಸುವಲ್ಲಿ ಮಗ್ನರಾಗಿದ್ದರೆ ಇತ್ತಮಧ್ಯಪ್ರದೇಶದಲ್ಲಿರಾಹುಲ್ ಗಾಂಧಿ ಎಂಬ ಹೆಸರಿನ ವ್ಯಕ್ತಿ ತನ್ನ ಹೆಸರಿನೊಂದಿಗಿರುವ ಗಾಂಧಿ ಸರ್‌ನೇಮ್ ತೆಗೆದು ಹಾಕಲು ಚಿಂತಿಸಿದ್ದಾರೆ.

ಇಂದೋರ್‌ನ ಜವಳಿ ಉದ್ಯಮಿಯೊಬ್ಬರು ತಾನು ಫೇಕ್ ಅಲ್ಲಎಂದು ಜನರಿಗೆ ಮನವರಿಕೆ ಮಾಡುವಲ್ಲಿ ನೊಂದು ಗಾಂಧಿ ಎಂಬ ಸರ್‌ನೇಮ್ ತೆಗೆದು ಹಾಕಲು ಯೋಚಿಸಿದ್ದಾರೆ.

ನನ್ನ ಬಳಿ ಗುರುತಿನ ಚೀಟಿಯಾಗಿಆಧಾರ್ಕಾರ್ಡ್‌ ಮಾತ್ರ ಇದೆ. ನಾನುಸಿಮ್ಕಾರ್ಡ್‌ ಅಥವ ಇತರ ಕೆಲಸಗಳಿಗೆ ದಾಖಲೆ ಪತ್ರವನ್ನ ಕೊಡುವಾಗ ಜನರು ನನ್ನನ್ನು ನಕಲಿ ಎಂದುಭಾವಿಸುತ್ತಾರೆ. ನನ್ನನ್ನು ಅನುಮಾನದಿಂದ ನೋಡಲಾಗುತ್ತದೆ ಎಂದು ಉದ್ಯಮಿರಾಹುಲ್ಗಾಂಧಿಪಿಟಿಐಸುದ್ದಿಸಂಸ್ಥೆಯೊಂದಿಗೆ ತನ್ನ ದುಃಖ ಹಂಚಿಕೊಂಡಿದ್ದಾರೆ.

ADVERTISEMENT

ನಾನು ಪೋನ್‌ನಲ್ಲಿ ಅಪರಿಚಿತರಿಗೆ ಪರಿಚಯ ಮಾಡುವಾಗ ಅವರು ನನ್ನನ್ನು ನಕಲಿ ಎಂದು ಭಾವಿಸಿ ನನ್ನಕರೆಯನ್ನುಕಟ್‌ ಮಾಡುತ್ತಾರೆ.

ತಮ್ಮ ಕುಟುಂಬದ ನಿಜವಾದ ಕುಲನಾಮಗಾಂಧಿ ಅಲ್ಲ. ನನ್ನ ತಂದೆಯ ಹೆಸರುರಾಜೀವ್.ಅವರು ಗಡಿಭದ್ರತಾಪಡೆಯಲ್ಲಿ ಬಟ್ಟೆ ಒಗೆಯುವ ಕೆಲಸ ಮಾಡುತ್ತಿದ್ದರು. ಅಲ್ಲಿನಅಧಿಕಾರಿಗಳು ನನ್ನತಂದೆಯನ್ನುಗಾಂಧಿ ಎಂದುಕರೆಯುತ್ತಿದ್ದರು.ಅವತ್ತಿನಿಂದ ನನ್ನತಂದೆಯರಿಗೆಗಾಂಧಿ ಹೆಸರಿನ ಮೇಲೆ ಮಮತೆ ಹುಟ್ಟಿದ್ದು ಅವರು ಅದನ್ನು ತನ್ನ ಹೆಸರಿನೊಂದಿಗೆಸೇರಿಸಿದರು.ನನ್ನನ್ನುಶಾಲೆಗೆ ಸೇರಿಸುವಾಗ ರಾಹುಲ್ಮಾಳವ್ಯಾಎಂಬ ಹೆಸರನ್ನುರಾಹುಲ್ಗಾಂಧಿ ಎಂದು ಬದಲಿಸಲಾಗಿತ್ತು ಅಂತಾರೆ ಈ ರಾಹುಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.