ADVERTISEMENT

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲಿನ ಎಲ್‌ಪಿಜಿ ವ್ಯಾಗನ್‌ಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2023, 4:57 IST
Last Updated 7 ಜೂನ್ 2023, 4:57 IST
Venugopala K.
   Venugopala K.

ಜಬಲ್‌ಪುರ(ಮಧ್ಯಪ್ರದೇಶ): ಎಲ್‌ಪಿಜಿ ಸಾಗಣೆ ಮಾಡುತ್ತಿದ್ದ ಸರಕು ಸಾಗಣೆ ರೈಲಿನ ಎರಡು ಎರಡು ವ್ಯಾಗನ್‌ಗಳು ಹಳಿ ತಪ್ಪಿರುವ ಘಟನೆ ಮಧ್ಯಪ್ರದೇಶದ ಶಹಾಪುರ ಭಿಟೋನಿಯಲ್ಲಿ ನಡೆದಿದೆ ಎಂದು ಜಬಲ್‌ಪುರದ ರೈಲ್ವೆ ಅಧಿಕಾರಿಗಳು ತಿಳಿಸಿರುವುದಾಗಿ ಎಎನ್‌ಐ ಟ್ವೀಟಿಸಿದೆ.

ಪಶ್ಚಿಮ ಸೆಂಟ್ರಲ್ ರೈಲ್ವೆ ಸಿಪಿಆರ್‌ಒ ಪ್ರಕಾರ, ಎಲ್‌ಪಿಜಿಯನ್ನು ಅನ್‌ಲೋಡ್ ಗೂಡ್ಸ್ ರೈಲನ್ನು ನಿಲ್ಲಿಸಿದ ಸಂದರ್ಭ ಹಳಿ ತಪ್ಪಿದೆ.

‘ಕಳೆದ ರಾತ್ರಿ ಗೂಡ್ಸ್ ರೈಲಿನಿಂದ ಎಲ್‌ಪಿಜಿಯನ್ನು ಅನ್‌ಲೋಡ್ ಮಾಡಲು ನಿಲ್ಲಿಸಿದಾಗ ಹಳಿತಪ್ಪಿದೆ. ರೈಲುಗಳ ಯಾವುದೇ ಮುಖ್ಯ ಸಂಚಾರಕ್ಕೆ ಇದರಿಂದ ತೊಂದರೆಯಾಗಿಲ್ಲ. ಮುಖ್ಯ ಮಾರ್ಗದಲ್ಲಿ ರೈಲು ಸಂಚಾರ ಸಾಮಾನ್ಯವಾಗಿದೆ. ಸೂರ್ಯೋದಯದ ನಂತರ ಹಳಿ ತಪ್ಪಿದ ರೈಲಿನ ಕಾರ್ಯಾಚರಣೆ ಕಾರ್ಯ ಪ್ರಾರಂಭವಾಯಿತು’ಎಂದು ಸಿಆರ್‌ಪಿಒ ತಿಳಿಸಿದ್ದಾರೆ.

ADVERTISEMENT

ಜೂನ್ 2ರಂದು ಒಡಿಶಾದ ಬಾಲೇಶ್ವರದಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 275ಕ್ಕೂ ಅಧಿಕ ಮಂದಿ ಮೃತಪಟ್ಟು, 1000ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.