ADVERTISEMENT

ಮಹಾರಾಷ್ಟ್ರ: ಸಚಿವಾಲಯದಲ್ಲಿ ಅಧಿಕಾರ ವಹಿಸಿಕೊಂಡ ಸಿ.ಎಂ ಏಕನಾಥ ಶಿಂಧೆ

ಪಿಟಿಐ
Published 7 ಜುಲೈ 2022, 11:34 IST
Last Updated 7 ಜುಲೈ 2022, 11:34 IST
ಮುಖ್ಯಮಂತ್ರಿಯಾಗಿ ಸಚಿವಾಲಯದಲ್ಲಿ ಅಧಿಕಾರ ವಹಿಸಿಕೊಂಡ ಏಕನಾಥ ಶಿಂಧೆ (ಪಿಟಿಐ ಚಿತ್ರ)
ಮುಖ್ಯಮಂತ್ರಿಯಾಗಿ ಸಚಿವಾಲಯದಲ್ಲಿ ಅಧಿಕಾರ ವಹಿಸಿಕೊಂಡ ಏಕನಾಥ ಶಿಂಧೆ (ಪಿಟಿಐ ಚಿತ್ರ)   

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಗುರುವಾರ ಸಚಿವಾಲಯದಲ್ಲಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡರು.

ಇದಕ್ಕೂ ಮೊದಲು ಕಚೇರಿಯಲ್ಲಿ ಪೂಜಾ ವಿಧಿ ವಿಧಾನಗಳು ನಡೆದವು. ಮುಖ್ಯಮಂತ್ರಿ ಕಚೇರಿಯಲ್ಲಿ ಶಿವಸೇನಾ ಸಂಸ್ಥಾಪಕ ಬಾಳಾ ಠಾಕ್ರೆ ಅವರ ದೊಡ್ಡ ಫೋಟೊ ಮತ್ತು ಶಿಂಧೆ ಅವರ ಗುರು ಆನಂದ್‌ ದಿಘೆ ಅವರ ಚಿತ್ರ ಇದೆ. ಸಚಿವಾಲಯದ ಕಟ್ಟಡವನ್ನು ಪ್ರವೇಶಿಸುತ್ತಿದ್ದಂತೆ ಮುಖ್ಯಮಂತ್ರಿ ಅವರು ಛತ್ರಪತಿ ಶಿವಾಜಿ ಮಹಾರಾಜ್‌ ಮತ್ತು ಡಾ. ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು.

‘ಬಾಳಾಠಾಕ್ರೆ ಅವರು ಒಬ್ಬರಿಗೆ ಸೇರಿದವರಲ್ಲ. ಅವರು ಇಡೀ ರಾಜ್ಯದ ಜನತೆಗೆ ಸೇರಿದವರು. ಈ ವಾಸ್ತವವನ್ನು ಯಾರೂ ಬದಲಿಸಲಾರರು’ ಎಂದು ಶಿಂಧೆ ನೇತೃತ್ವದ ಬಣದ ವಕ್ತಾರ ದೀಪಕ್‌ ಕೆಸರ್ಕರ್‌ ಹೇಳಿದರು.

ADVERTISEMENT

ಶಿವಸೇನಾ ತೊರೆದ ಮಾಜಿ ಸಂಸದ: ಮಾಜಿ ಸಂಸದ ಆನಂದರಾವ್‌ ಅದ್ಸುಲ್‌ ಅವರು ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಉದ್ಧವ್‌ ಠಾಕ್ರೆ ಬಣದ ಶಿವಸೇನಾಕ್ಕೆ ಹಿನ್ನಡೆ ಆಗಿದೆ.

ಇವರು ಈ ಹಿಂದೆ ಅಮರಾವತಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು ಆದರೆ 2019ರಲ್ಲಿ ನವನೀತ್‌ ರಾಣಾ ಅವರ ಎದುರು ಸೋತಿದ್ದರು.

‘ನಮ್ಮ ತಂದೆ ಶಿವಸೈನಿಕನಾಗಿ ಉಳಿಯುತ್ತಾರೆ’ ಎಂದು ಅವರ ಮಗ ಅಭಿಜಿತ್‌ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.