ADVERTISEMENT

ಹೈಕೋರ್ಟ್ ನೋಟಿಸ್ ಪ್ರಶ್ನಿಸಿ ಮಹಾರಾಷ್ಟ್ರ ರಾಜ್ಯಪಾಲ ‘ಸುಪ್ರೀಂ‘ ಗೆ ಅರ್ಜಿ

ಪಿಟಿಐ
Published 17 ನವೆಂಬರ್ 2020, 11:47 IST
Last Updated 17 ನವೆಂಬರ್ 2020, 11:47 IST
ಭಗತ್ ಸಿಂಗ್ ಕೋಶಿಯಾರಿ
ಭಗತ್ ಸಿಂಗ್ ಕೋಶಿಯಾರಿ   

ನವದೆಹಲಿ: ಮಾಜಿ ಮುಖ್ಯಮಂತ್ರಿಯಾಗಿ ತಮಗೆ ಉತ್ತರಾಖಂಡ ಸರ್ಕಾರ ಹಂಚಿಕೆ ಮಾಡಿದ್ದ ಸರ್ಕಾರಿ ಬಂಗಲೆಗೆ ಮಾರುಕಟ್ಟೆ ದರದಲ್ಲಿ ಬಾಡಿಗೆ ಪಾವತಿ ಕುರಿತು ಅಲ್ಲಿನ ಹೈಕೋರ್ಟ್ ನೀಡಿರುವ ನೋಟಿಸ್‌ ಪ್ರಶ್ನಿಸಿ, ಸದ್ಯ ಮಹಾರಾಷ್ಟ್ರದ ರಾಜ್ಯಪಾಲರಾಗಿರುವ ಭಗತ್ ಸಿಂಗ್ ಕೋಶಿಯಾರಿ ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಕೋರಿರುವ ಅವರು, ಸದ್ಯ ತಾವು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದು, ಸಂವಿಧಾನದ ವಿಧಿ 361ರ ಅನ್ವಯ ರಾಷ್ಟ್ರಪತಿ ಮತ್ತು ರಾಜ್ಯಪಾಲರ ವಿರುದ್ಧ ಇಂಥ ಕ್ರಮ ಜರುಗಿಸುವಂತಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ.

ಈ ಪ್ರಕರಣದಲ್ಲಿ ತಮ್ಮ ವಾದವನ್ನು ಆಲಿಸಿಲ್ಲ. ಯಾವುದೇ ಚಿಂತನೆಯಿಲ್ಲದೇ ಮಾರುಕಟ್ಟೆ ದರ ನಿಗದಿಪಡಿಸಿದ್ದು, ಡೆಹ್ರಾಡೂನ್‌ನಲ್ಲಿ ವಸತಿ ಉದ್ದೇಶಕ್ಕೆ ದುಬಾರಿ ಆದುದಾಗಿದೆ ಎಂದು ವಾದಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.