ADVERTISEMENT

ಮಹಾರಾಷ್ಟ್ರದ ಪಾಲ್ಗಾರ್‌ನಲ್ಲಿ ಲಘು ಭೂಕಂಪ

ಪಿಟಿಐ
Published 30 ಸೆಪ್ಟೆಂಬರ್ 2021, 6:15 IST
Last Updated 30 ಸೆಪ್ಟೆಂಬರ್ 2021, 6:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಾಲ್ಗಾರ್ (ಪಿಟಿಐ): ಮಹಾರಾಷ್ಟ್ರದ ಪಾಲ್ಗಾರ್‌ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 8.46 ಗಂಟೆಗೆ ಲಘು ಭೂಕಂಪನ ಆಗಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 2.9 ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವುದೇ ಸಾವು–ನೋವು ಅಥವಾ ಆಸ್ತಿ ಹಾನಿಯಾದ ವರದಿಯಾಗಿಲ್ಲ ಎಂದು ಜಿಲ್ಲಾ ವಿಪತ್ತು ನಿಯಂತ್ರಣ ಮುಖ್ಯಸ್ಥ ವಿವೇಕಾನಂದ ಕದಂ ಅವರು ತಿಳಿಸಿದ್ದಾರೆ.

ಮುಂಬೈನಿಂದ 110 ಕಿ.ಮೀ ದೂರದಲ್ಲಿರುವ ಪಾಲ್ಗಾರ್ ಜಿಲ್ಲೆಯ ಕೆಲವು ಭಾಗಗಳಲ್ಲಿ 2018ರಿಂದಲೂ ಆಗಾಗ್ಗೆ ಹೀಗೆ ಭೂಮಿಯು ಕಂಪಿಸುವ ಅನುಭವವಾಗುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.