ADVERTISEMENT

ಮರಾಠಿ ಭಾಷಿಕರ ಮೇಲೆ ಲಾಠಿ ಪ್ರಹಾರಕ್ಕೆ: ಮಹಾರಾಷ್ಟ್ರ ಸಚಿವ ಖಂಡನೆ

ಪಿಟಿಐ
Published 30 ಆಗಸ್ಟ್ 2020, 12:22 IST
Last Updated 30 ಆಗಸ್ಟ್ 2020, 12:22 IST
ಏಕನಾಥ್‌ ಶಿಂಧೆ
ಏಕನಾಥ್‌ ಶಿಂಧೆ   

ಮುಂಬೈ: ಕರ್ನಾಟಕದ ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಮರಾಠಿ ಭಾಷಿಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದನ್ನು ಮಹಾರಾಷ್ಟ್ರದ ನಗರಾಭಿವೃದ್ದಿ ಸಚಿವ ಏಕನಾಥ್‌ ಶಿಂಧೆ ಖಂಡಿಸಿದ್ದು, ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಆಗಸ್ಟ್‌ 28ರಂದು ಪತ್ರ ಬರೆದಿರುವ ಅವರು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಮರಾಠಿಗರ ವಿರೋಧ ಇಲ್ಲ. ಆದರೆ, ಶಿವಾಜಿ ಮಹಾರಾಜರ ಪ್ರತಿಮೆಗೆ ತೀರ ಹತ್ತಿರದಲ್ಲಿಯೇಉದ್ದೇಶಪೂರ್ವಕವಾಗಿ ರಾಯಣ್ಣ ಪ್ರತಿಮೆ ಸ್ಥಾಪಿಸಲಾಗಿದೆ’ ಎಂದು ವಿವರಿಸಿದ್ದಾರೆ.

‘ಪ್ರತಿಮೆ ಪ್ರತಿಷ್ಠಾಪನೆಯ ವಿವಾದವನ್ನು ಬಳಸಿ ಮರಾಠಿ ಮತ್ತು ಕನ್ನಡ ಭಾಷಿಕರ ನಡುವೆ ಸಂಘರ್ಷ ಹುಟ್ಟುಹಾಕುವ ಹುನ್ನಾರ ನಡೆಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತಪಡಿಸಿದ್ದ ಮರಾಠಿ ಭಾಷಿಕರು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪನೆಗೆ ಒತ್ತಾಯಿಸಿದ ಕಾರಣ ಗಲಾಟೆ ನಡೆದಿತ್ತು. ಆಗ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.