ADVERTISEMENT

ಮಹಾರಾಷ್ಟ್ರ ಸಚಿವ ಏಕನಾಥ ಶಿಂಧೆಗೆ ಬೆದರಿಕೆ ಪತ್ರ

ಪಿಟಿಐ
Published 13 ಫೆಬ್ರುವರಿ 2022, 11:13 IST
Last Updated 13 ಫೆಬ್ರುವರಿ 2022, 11:13 IST
ಏಕನಾಥ ಶಿಂಧೆ
ಏಕನಾಥ ಶಿಂಧೆ   

ಠಾಣೆ (ಪಿಟಿಐ): ರಾಜ್ಯದ ಗಡ್‌ಚಿರೋಲಿ ಜಿಲ್ಲೆಯಲ್ಲಿ ತಮ್ಮ ಕಾರ್ಯಕರ್ತರನ್ನು ಕೊಂದಿದ್ದಕ್ಕಾಗಿ ಪ್ರತೀಕಾರ ತೀರಿಸಿಕೊಳ್ಳುವುದಾಗಿ ನಕ್ಸಲರು ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವ ಏಕನಾಥ ಶಿಂಧೆ ಅವರಿಗೆ ಬೆದರಿಕೆ ಪತ್ರವೊಂದನ್ನು ಬರೆದಿದ್ದಾರೆ ಎಂದು ಮೂಲಗಳು ಭಾನುವಾರ ಹೇಳಿವೆ.

ಠಾಣೆಯಲ್ಲಿನ ಸಚಿವರ ನಿವಾಸಕ್ಕೆ ಶುಕ್ರವಾರ ಪತ್ರವನ್ನು ಕಳುಹಿಸಲಾಗಿದೆ. ಆದ್ದರಿಂದ ನಿವಾಸದ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ಹೇಳಿದರು.

ಗಡ್‌ಚಿರೋಲಿಯಲ್ಲಿ ನಕ್ಸಲ್‌ ಹಾವಳಿಯನ್ನು ತಪ್ಪಿಸಲು ಅಭಿವೃದ್ಧಿಯೊಂದೇ ಮಾರ್ಗ ಎಂದು ಸಚಿವ ಏಕನಾಥ್‌ ಹೇಳಿದ್ದರು.

ADVERTISEMENT

ಕಳೆದ ವರ್ಷ ನವೆಂಬರ್‌ನಲ್ಲಿ ಉನ್ನತ ಕಮಾಂಡರ್‌ಗಳು ಸೇರಿ 26 ನಕ್ಸಲರನ್ನು ಗಡ್‌ಚಿರೋಲಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿತ್ತು.

ಬೆದರಿಕೆ ಪತ್ರ ಸಂಬಂಧ ಠಾಣೆ ಪೊಲೀಸರು ದೂರು ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಪತ್ರವನ್ನು ಅಪರಾಧ ವಿಭಾಗದ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.