ನವದೆಹಲಿ: ಮಹದಾಯಿ ನದಿ ನೀರು ಹಂಚಿಕೆ ಮಾಡಿ ನೀಡಲಾದ ಐತೀರ್ಪಿನಲ್ಲಿನ ಕೆಲವು ಅಂಶಗಳ ಕುರಿತು ಸ್ವಷ್ಟನೆ ಕೋರಿ ರಾಜ್ಯ ಸರ್ಕಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದೆ.
ಮಹದಾಯಿಯ ಕೆಳ ಹಂತದಲ್ಲಿರುವ ಗೋವಾಗೆ ಬಳಕೆಯಾಗದ ನೀರಿನ ಮಿತಿಯನ್ನು ಹೇರಿಲ್ಲ. ಆದರೆ, ಮೇಲ್ಭಾಗದ ಕರ್ನಾಟಕ ಮತ್ತು ಮಹಾರಾಷ್ಟ್ರಗಳಿಗೆ ಮಿತಿ ಹೇರಿರುವುದು ಏಕೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ನ್ಯಾಯಮೂರ್ತಿ ಜೆ.ಎಂ. ಪಾಂಚಾಲ್ ನೇತೃತ್ವದ ನ್ಯಾಯಮಂಡಳಿಗೆ ಸಲ್ಲಿಸಲಾದ ಅರ್ಜಿಯಲ್ಲಿ ಕೋರಲಾಗಿದೆ.
ಗೋವಾ ಹಿತಾಸಕ್ತಿಗೆ ಧಕ್ಕೆಯಾಗದಂತೆ ಕರ್ನಾಟಕವು ಕೋಟ್ನಿ ಜಲವಿದ್ಯುತ್ ಯೋಜನೆ ರೂಪಿಸಿದೆ. ಆದರೂ ನೀರು ಹಂಚಿಕೆಗೆ ಅನುಸರಿಸಬೇಕಾದ ಸೂತ್ರವನ್ನು ತಪ್ಪಾಗಿ ಅರ್ಥೈಸಲಾಗಿದೆ. ಯೋಜನೆಗಾಗಿ ಒಟ್ಟು 14.971 ಟಿಎಂಸಿ ಅಡಿ ನೀರಿಗೆ ಸಲ್ಲಿಸಲಾದ ಮನವಿಯನ್ನು ತಿರಸ್ಕರಿಸಿ ಕೇವಲ 8.02 ಟಿಎಂಸಿ ಅಡಿ ಹಂಚಿಕೆ ಮಾಡಿರುವುದರ ಹಿಂದಿನ ಉದ್ದೇಶವೇನು ಎಂಬುದಕ್ಕೂ ಸ್ಪಷ್ಟನೆ ಬಯಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.