ADVERTISEMENT

ಮಹಾರಾಷ್ಟ್ರ: ತಾರಕ್ಕ ಸೇರಿ 11 ಮಂದಿ ನಕ್ಸಲರು ಶರಣು

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 15:20 IST
Last Updated 2 ಜನವರಿ 2025, 15:20 IST
<div class="paragraphs"><p>ನಕ್ಸಲರು</p></div>

ನಕ್ಸಲರು

   

ಮುಂಬೈ: ಮಹಾರಾಷ್ಟ್ರದ ಗಢಚಿರೋಲಿಯಲ್ಲಿ ವಿಮಲಾ ಚಂದ್ರ ಸಿದಂ ಅಲಿಯಾಸ್‌ ತಾರಕ್ಕ ಸೇರಿದಂತೆ 11 ನಕ್ಸಲರು ಶಸ್ತ್ರಗಳನ್ನು ತ್ಯಜಿಸಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಮುಂದೆ ಬುಧವಾರ ಶರಣಾಗಿದ್ದಾರೆ.

 ತಾರಕ್ಕ ಅವರು 1986ರಲ್ಲಿ ನಕ್ಸಲ್‌ ಚಳವಳಿ ಸೇರ್ಪಡೆಯಾಗಿದ್ದರು. ನಂತರ ವಿವಿಧ ಶ್ರೇಣಿಗಳಲ್ಲಿ ಕಾರ್ಯನಿರ್ವಹಿಸಿ ದಂಡಕಾರಣ್ಯ ವಿಶೇಷ ವಲಯ ಸಮಿತಿ ಸದಸ್ಯರಾಗಿದ್ದರು. ಭದ್ರತಾ ಸಿಬ್ಬಂದಿಯೊಂದಿಗೆ ನಡೆದ 35 ಎನ್‌ಕೌಂಟರ್‌ಗಳಲ್ಲಿ ಭಾಗಿಯಾಗಿದ್ದರು. 66 ಪ್ರಕರಣಗಳಲ್ಲಿ ಅವರು ಪೊಲೀಸರಿಗೆ ಬೇಕಾಗಿದ್ದರು. ಇವರ ಸುಳಿವು ನೀಡಿದವರಿಗೆ ₹22 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.