ADVERTISEMENT

ಮಹಾರಾಷ್ಟ್ರ: ಮಹಿಳಾ ಕಾನ್‌ಸ್ಟೆಬಲ್‌ಗೆ ಥಳಿಸಿದ ಮಹಿಳೆಯರಿಬ್ಬರ ಬಂಧನ

ಪಿಟಿಐ
Published 16 ಆಗಸ್ಟ್ 2023, 6:47 IST
Last Updated 16 ಆಗಸ್ಟ್ 2023, 6:47 IST
ಬಂಧನ (ಪ್ರಾತಿನಿಧಿಕ ಚಿತ್ರ)
ಬಂಧನ (ಪ್ರಾತಿನಿಧಿಕ ಚಿತ್ರ)   

ಥಾಣೆ: ಮಹಿಳಾ ಕಾನ್‌ಸ್ಟೆಬಲ್‌ಗೆ ಥಳಿಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಶಿಲ್-ದೈಘರ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 28 ವರ್ಷದ ಮಹಿಳಾ ಕಾನ್‌ಸ್ಟೆಬಲ್ ಮೇಲೆ ಮಂಗಳವಾರ ಇಬ್ಬರು ಮಹಿಳೆಯರು ಹಲ್ಲೆ ನಡೆಸಿದ್ದರು. ಘಟನೆ ಬಳಿಕ ಆರೋಪಿ ಮಹಿಳೆಯರನ್ನು ಗುರುತಿಸಿ ಬಂಧಿಸಲಾಗಿದೆ ಎಂದು ಪೊಲೀಸ್‌ ವಕ್ತಾರರು ತಿಳಿಸಿದ್ದಾರೆ.

ಘಟನೆ ಏನು?

ADVERTISEMENT

ಗಂಡನ ವಿರುದ್ಧ ದೂರು ನೀಡಲು ಶಿಲ್-ದೈಘರ್ ಪೊಲೀಸ್ ಠಾಣೆಗೆ ಮಹಿಳೆಯೊಬ್ಬಳು ಮಂಗಳವಾರ ಬಂದಿದ್ದಳು. ಮಹಿಳೆ ದೂರು ನೀಡುವ ವಿಷಯ ತಿಳಿದ ಗಂಡ ಪೊಲೀಸ್‌ ಠಾಣೆ ನುಗ್ಗಿದ್ದನು. ಗಂಡನ ಜೊತೆ ಇನ್ನಿಬ್ಬರು ಮಹಿಳೆಯರು ಬಂದಿದ್ದರು. ಠಾಣೆಯಲ್ಲಿ ಎರಡು ಕಡೆಯವರ ನಡುವೆ ವಾಗ್ವಾದ ಏರ್ಪಟ್ಟಿತ್ತು.

ಪರಿಸ್ಥಿತಿಯನ್ನು ನಿಯಂತ್ರಿಸಲು ಮಹಿಳಾ ಕಾನ್‌ಸ್ಟೆಬಲ್‌ ಪ್ರಯತ್ನಿಸಿದ್ದು, ಎರಡು ಕಡೆಯವರಲ್ಲಿ ಸಮಾಧಾನದಿಂದ ಇರಲು ತಿಳಿಸಿದ್ದರು. ಇದರಿಂದ ಕೋಪಗೊಂಡ ಗಂಡನ ಕಡೆಯ ಮಹಿಳೆಯರಿಬ್ಬರು ಕಾನ್‌ಸ್ಟೆಬಲ್‌ ಮೇಲೆ ಜಗಳಕ್ಕೆ ಹೋಗಿದ್ದರು. ಕಾನ್‌ಸ್ಟೆಬಲ್‌ ಕೂದಲು ಎಳೆದು ದೊಣ್ಣೆಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಹಲ್ಲೆ ನಡೆಸಿದ ಮಹಿಳೆಯರಿಬ್ಬರು ಮೇಲೆ ಐಪಿಸಿ ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.