ADVERTISEMENT

ಮಹಾರಾಷ್ಟ್ರ: ಮಹಿಳಾ ಪ್ರಾತಿನಿಧ್ಯ ತುಸು ಹೆಚ್ಚಳ

ಪಿಟಿಐ
Published 25 ಅಕ್ಟೋಬರ್ 2019, 17:35 IST
Last Updated 25 ಅಕ್ಟೋಬರ್ 2019, 17:35 IST
   

ಮುಂಬೈ:ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಿದೆ. ಈ ಹಿಂದಿನ ವಿಧಾನಸಭೆಯಲ್ಲಿ22 ಮಹಿಳಾ ಶಾಸಕಿಯರಿದ್ದರು. ಈ ಚುನಾವಣೆಯಲ್ಲಿ 24 ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ.

ಎಲ್ಲಾ ಪಕ್ಷಗಳೂ ಮಹಿಳೆಯರಿಗೆ ಟಿಕೆಟ್ ನೀಡಿದ್ದವು. ಆದರೆ ಒಟ್ಟು ಅಭ್ಯರ್ಥಿಗಳಿಗೆ ಹೋಲಿಸಿದರೆ ಮಹಿಳಾ ಅಭ್ಯರ್ಥಿಗಳ ಪ್ರಮಾಣ ಶೇ 10ಕ್ಕಿಂತಲೂ ಕಡಿಮೆ ಇತ್ತು. 288 ಸ್ಥಾನಗಳಿರುವ ವಿಧಾನಸಭೆಗೆ ಆಯ್ಕೆಯಾಗಿರುವ ಮಹಿಳಾ ಶಾಸಕಿಯರ ಪ್ರಮಾಣವೂ ಶೇ 10ಕ್ಕಿಂತ ಕಡಿಮೆ ಇದೆ.

ವಿವಿಧ ಪಕ್ಷಗಳಲ್ಲಿ ಮಹಿಳಾ ಶಾಸಕಿಯರು

ADVERTISEMENT

12 ಬಿಜೆಪಿ ಶಾಸಕಿಯರು

2 ಶಿವಸೇನಾ ಶಾಸಕಿಯರು

5 ಕಾಂಗ್ರೆಸ್ ಶಾಸಕಿಯರು

3 ಎನ್‌ಸಿಪಿ ಶಾಸಕಿಯರು

2 ಪಕ್ಷೇತರ ಶಾಸಕಿಯರು

ಬಿಜೆಪಿಯಿಂದ 17, ಶಿವಸೇನಾದಿಂದ 8 ಮಹಿಳೆಯರು ಕಣದಲ್ಲಿದ್ದರು

ಕಾಂಗ್ರೆಸ್‌ನಿಂದ 14, ಎನ್‌ಸಿಪಿಯಿಂದ 3 ಮಹಿಳೆಯರು ಕಣದಲ್ಲಿದ್ದರು

3,237 ಅಭ್ಯರ್ಥಿಗಳ ಪೈಕಿ 235 ಮಹಿಳಾ ಅಭ್ಯರ್ಥಿಗಳಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.