
ಮುಂಬೈ: 10 ನಗರ ಪಾಲಿಕೆಗಳ ಚುನಾವಣೆಯಲ್ಲಿ 65 ಅಭ್ಯರ್ಥಿಗಳು ಎದುರಾಳಿಯೇ ಇಲ್ಲದೆ ಗೆಲುವು ಸಾಧಿಸಿದ್ದಾರೆ ಎಂದು ಮಹಾರಾಷ್ಟ್ರದ ಚುನಾವಣಾ ಆಯೋಗ (ಎಸ್‌ಇಸಿ) ಶುಕ್ರವಾರ ತಿಳಿಸಿದೆ.
ಮಹಾರಾಷ್ಟ್ರದ 29 ನಗರ ಪಾಲಿಕೆಗಳಿಗೆ ಜ.15ರಂದು ಚುನಾವಣೆ ನಡೆದಿತ್ತು. ಇಂದು(ಜ.16) ಮತ ಎಣಿಕೆ ನಡೆಯುತ್ತಿದೆ.
ಎದುರಾಳಿಯೇ ಇಲ್ಲದೇ ಚುನಾವಣೆ ಗೆದ್ದ 65 ಜನರಲ್ಲಿ 43 ಮಂದಿ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ. ಏಕನಾಥ ಶಿಂಧೆ ನೇತೃತ್ವದ ಶಿವಸೇನಾದ 18 ಅಭ್ಯರ್ಥಿಗಳು, ಕಾಂಗ್ರೆಸ್ ಹಾಗೂ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಇಬ್ಬರು ಕೂಡ ಎದುರಾಳಿ ಇಲ್ಲದೇ ಗೆಲುವು ಸಾಧಿಸಿದ್ದಾರೆ.
ಠಾಣೆ ಜಿಲ್ಲೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಎದುರಾಳಿಯೇ ಇಲ್ಲದೆ ಗೆದಿದ್ದಾರೆ. 22 ಅಭ್ಯರ್ಥಿಗಳಲ್ಲಿ 16 ಜನ ಬಿಜೆಪಿ ಹಾಗೂ 6 ಮಂದಿ ಶಿವಸೇನಾದಿಂದ ಕಣಕ್ಕಿಳಿದಿದ್ದರು.
ಪನ್ವೆಲ್, ಜಲಗಾಂವ್, ಅಹಲ್ಯಾನಗರ ಹಾಗೂ ಧುಲೆ ಕ್ಷೇತ್ರಗಳಲ್ಲಿ ಕೂಡ ಎದುರಾಳಿಗಳೇ ಇಲ್ಲದೆ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಮೈತ್ರಿ ಸರ್ಕಾರದ ಹೆಚ್ಚಿನ ಅಭ್ಯರ್ಥಿಗಳು ಎದುರಾಳಿ ಇಲ್ಲದೇ ಗೆಲುವು ಸಾಧಿಸಿರುವ ಕುರಿತು ನಗರಸಭೆ ಆಯುಕ್ತರಿಂದ ವರದಿ ಕೇಳಲಾಗಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ದಿನೇಶ್ ವಾಘ್ಮೋರೆ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯು ಮತ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.