ADVERTISEMENT

ಮಹಾರಾಷ್ಟ್ರ: ಸ್ಥಳೀಯ ಚುನಾವಣೆಯಲ್ಲಿ 4,422 ಸ್ಥಾನಗಳಲ್ಲಿ ಗೆದ್ದ ‘ಮಹಾಯುತಿ’ 

ಪಿಟಿಐ
Published 23 ಡಿಸೆಂಬರ್ 2025, 16:20 IST
Last Updated 23 ಡಿಸೆಂಬರ್ 2025, 16:20 IST
   

ಮುಂಬೈ: ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಜರುಗಿದ ಮುನ್ಸಿಪಲ್ ಕೌನ್ಸಿಲ್ ಹಾಗೂ ನಗರ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಯು 6,851 ಸ್ಥಾನಗಳಲ್ಲಿ 4,422ರಲ್ಲಿ ಜಯಗಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಚುನಾವಣೆಯಲ್ಲಿ ಬಿಜೆಪಿ 2,431 ಸ್ಥಾನ, ಶಿವ ಸೇನಾ 1,025 ಸ್ಥಾನ ಹಾಗೂ ಎನ್‌ಸಿಪಿ 966 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 

ವಿರೋಧ ಪಕ್ಷವಾದ ಕಾಂಗ್ರೆಸ್‌ 824 ಸ್ಥಾನ, ಎನ್‌ಸಿಪಿ(ಎಸ್‌ಪಿ) 256 ಸ್ಥಾನ ಹಾಗೂ ಶಿವ ಸೇನಾ (ಯುಬಿಟಿ) 244 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 

ADVERTISEMENT

ಬಿಎಸ್‌ಪಿ 8 ಕ್ಷೇತ್ರ, ಎಎಪಿ, ಸಿಪಿಐ, ಸಿಪಿಐ(ಎಂ) 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. 

246 ಮುನ್ಸಿಪಲ್ ಕೌನ್ಸಿಲ್ ಹಾಗೂ 42 ನಗರ ಪಂಚಾಯಿತಿಗಳಿಗೆ ಡಿ.2 ಮತ್ತು ಡಿ.20 ರಂದು ಮತದಾನ ನಡೆದಿತ್ತು. ಡಿ.21ರಂದು ಮತ ಎಣಿಕೆ ಜರುಗಿತ್ತು. 

ಚುನಾವಣೆಯಲ್ಲಿ ಸ್ಪರ್ಧಿಸಿದ್ದ 8 ಅಭ್ಯರ್ಥಿಗಳು ಮತದಾನಕ್ಕೂ ಮುನ್ನವೇ ಮೃತಪಟ್ಟಿದ್ದರಿಂದ, 8 ಕ್ಷೇತ್ರಗಳ ಚುನಾವಣೆಯನ್ನು ಮುಂದೂಡಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.