ADVERTISEMENT

ಕೋತಿಮರಿ ಕೊಂದದ್ದಕ್ಕೆ ಪ್ರತೀಕಾರ: 80 ನಾಯಿಮರಿಗಳನ್ನು ಕೊಂದ ಮಂಗಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಡಿಸೆಂಬರ್ 2021, 4:21 IST
Last Updated 19 ಡಿಸೆಂಬರ್ 2021, 4:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಜಲ್‌ಗಾಂವ್‌ನಲ್ಲಿ ಕಳೆದ ಮೂರು ತಿಂಗಳಿಂದ ಸುಮಾರು 80 ನಾಯಿಮರಿಗಳನ್ನು ಮಂಗಗಳು ಕೊಂದು ಹಾಕಿವೆಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.

ಇದು ಸ್ಥಳೀಯ ನಿವಾಸಿಗಳಲ್ಲಿ ಅಚ್ಚರಿ ಮೂಡಿಸಿದೆ. ಈ ಪ್ರದೇಶದಲ್ಲಿ ಬೀದಿನಾಯಿಗಳು ಕೋತಿ ಮರಿಯನ್ನು ಕೊಂದು ಹಾಕಿದ ಬಳಿಕ ಈ ಸೇಡಿನ ಸರಣಿ ಆರಂಭವಾಗಿದೆ.

ಅಲ್ಲಿಂದ ಬಳಿಕ ಮಂಗಗಳು ನಾಯಿ ಮರಿಗಳನ್ನು ಎತ್ತಿಕೊಂಡು ಬಂದು ಮರ ಅಥವಾ ಎತ್ತರದ ಕಟ್ಟಡದ ಮೇಲಿಂದ ಎಸೆಯುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ADVERTISEMENT

ಮಜಲ್‌ಗಾಂವ್‌ನಲ್ಲಿರುವ ಲವೂಲ್ ಗ್ರಾಮದಲ್ಲಿ ಸುಮಾರು 5,000 ನಿವಾಸಿಗಳಿದ್ದಾರೆ. ಆದರೆ ಈ ಗ್ರಾಮದಲ್ಲೀಗ ಒಂದೇ ಒಂದು ನಾಯಿ ಮರಿಯೂ ಉಳಿದಿಲ್ಲ. ಇಲ್ಲಿ ಮಂಗಗಳ ವರ್ತನೆಯು ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ.

ಸ್ಥಳಕ್ಕೆ ಭೇಟಿ ಕೊಟ್ಟಿರುವ ನಾಗ್ಪುರ ಅರಣ್ಯ ಇಲಾಖೆಯ ಅಧಿಕಾರಿಗಳು ನಾಯಿಮರಿಗಳನ್ನು ಕೊಂದಿರುವ ಎರಡು ಕೋತಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಈ ಎರಡು ಕೋತಿಗಳನ್ನು ನಾಗ್ಪುರಕ್ಕೆ ರವಾನಿಸಲಾಗಿದ್ದು, ಅಲ್ಲಿನ ಸಮೀಪದ ಅರಣ್ಯದಲ್ಲಿ ಬಿಡುವುದಾಗಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.