ADVERTISEMENT

ಮಹಾರಾಷ್ಟ್ರ: ಕಳೆದ 24 ಗಂಟೆಗಳಲ್ಲಿ 80 ಪೊಲೀಸರಿಗೆ ಕೊರೊನಾ ಸೋಂಕು, ಇಬ್ಬರ ಸಾವು

ಏಜೆನ್ಸೀಸ್
Published 26 ಮೇ 2020, 6:41 IST
Last Updated 26 ಮೇ 2020, 6:41 IST
ಕರ್ತವ್ಯ ನಿರತ ಮಹಾರಾಷ್ಟ್ರ ಪೊಲೀಸ್‌
ಕರ್ತವ್ಯ ನಿರತ ಮಹಾರಾಷ್ಟ್ರ ಪೊಲೀಸ್‌    

ಮುಂಬೈ: ಕಳೆದ 24 ಗಂಟೆಗಳಲ್ಲಿ, ಮಹಾರಾಷ್ಟ್ರದಾದ್ಯಂತ 80 ಪೊಲೀಸ್ ಸಿಬ್ಬಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ಇರುವುದು ದೃಢಪಟ್ಟಿದ್ದು, ಎರಡು ಸಾವುಗಳು ಸಂಭವಿಸಿವೆ.

ಭಾರತದಲ್ಲಿ ಕೊರೊನಾ ಸೋಂಕಿನ ಕೇಂದ್ರಬಿಂದುವಾಗಿ ಮಾರ್ಪಟ್ಟಿರುವ ಮಹಾರಾಷ್ಟ್ರದಲ್ಲಿ ಕೋವಿಡ್‌-19 ಪ್ರಕರಣಗಳು ಹೆಚ್ಚುತ್ತಲೇ ಇವೆ.

ಕಳೆದ 24 ಗಂಟೆಗಳಲ್ಲಿ 80 ಪೊಲೀಸ್‌ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದ್ದು, ಈವರೆಗೂ 1889 ಮಹಾರಾಷ್ಟ್ರ ಪೊಲೀಸರು ಕೊರೊನಾ ಸೋಂಕಿತರಾಗಿದ್ದಾರೆ. ಮೃತಪಟ್ಟ ಪೊಲೀಸರ ಸಂಖ್ಯೆ 20ಕ್ಕೆ ತಲುಪಿದೆ.

ADVERTISEMENT

1,031 ಕ್ರಿಯಾಶೀಲ ಪ್ರಕರಣಗಳಿದ್ದು, 838 ಸಿಬ್ಬಂದಿ ಚೇತರಿಸಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರು ಸೃಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.