ADVERTISEMENT

ಮಹಾರಾಷ್ಟ್ರದಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯ ಸಹಿಸುವುದಿಲ್ಲ: ಅನಿಲ್ ದೇಶ್‌ಮುಖ್

ಕ್ವಾರಂಟೈನ್ ಕೇಂದ್ರದಲ್ಲಿ ಅತ್ಯಾಚಾರ ಪ್ರಕರಣ

ಪಿಟಿಐ
Published 14 ಸೆಪ್ಟೆಂಬರ್ 2020, 12:14 IST
Last Updated 14 ಸೆಪ್ಟೆಂಬರ್ 2020, 12:14 IST
ಅನಿಲ್ ದೇಶ್‌ಮುಖ್  (ಕೃಪೆ: ಟ್ವಿಟರ್)
ಅನಿಲ್ ದೇಶ್‌ಮುಖ್ (ಕೃಪೆ: ಟ್ವಿಟರ್)   

ಮುಂಬೈ: ಮಹಾರಾಷ್ಟ್ರದ ಮೀರಾ ರೋಡ್‌ನಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಗೃಹ ಸಚಿವ ಅನಿಲ್ ದೇಶ್‌ಮುಖ್ ತಪ್ಪಿತಸ್ಥರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

ಅತ್ಯಾಚಾರ ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ವಿಧಾನ ಪರಿಷತ್ತು ಉಪಾಧ್ಯಕ್ಷೆ ನೀಲಂ ಘೋರೆಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ದೇಶ್‌ಮುಖ್, ಮಹಾರಾಷ್ಟ್ರದಲ್ಲಿ ಮಹಿಳೆಯರ ವಿರುದ್ಧ ಯಾವುದೇ ಅತ್ಯಾಚಾರ ಪ್ರಕರಣವನ್ನುನಾನು ಸಹಿಸುವುದಿಲ್ಲ ಎಂದಿದ್ದಾರೆ.

ಥಾಣೆ ಜಿಲ್ಲೆಯ ಮೀರಾ ರೋಡ್‌ನಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ಜೂನ್ ತಿಂಗಳಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ 27ರ ಹರೆಯದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ವ್ಯಕ್ತಿ ಕ್ವಾರಂಟೈನ್ ಕೇಂದ್ರದ ಸಹಾಯಕನಾಗಿದ್ದಾನೆ.

ADVERTISEMENT

ಸಂತ್ರಸ್ತೆ ಕಳೆದ ಶನಿವಾರ ನವ್‌ಘಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಕ್ವಾರಂಟೈನ್ ಕೇಂದ್ರದಲ್ಲಿದ್ದ ತನ್ನ ಸಂಬಂಧಿ 11ರ ಹರೆಯದ ರೋಗಿ ಶುಶ್ರೂಷೆಗಾಗಿ ಹೋಗಿದ್ದಾಗಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ಹೇಳಿರುವುದಾಗಿ ಎಂದು ಪೊಲೀಸ್ ಅಧಿಕಾರಿ ಸಂಪತ್ ಪಾಟೀಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.