ADVERTISEMENT

‘ಮಹಾ’ ಬಂಡಾಯ: ಎನ್‌ಸಿಪಿ, ಕಾಂಗ್ರೆಸ್ ಬಗ್ಗೆ ಬಂಡಾಯ ನಾಯಕರ ಆಕ್ರೋಶ

ಪಿಟಿಐ
Published 22 ಜೂನ್ 2022, 7:48 IST
Last Updated 22 ಜೂನ್ 2022, 7:48 IST
ಶಿವಸೇನಾ ನಾಯಕರಾದ ಸಂಜಯ್ ರಾವುತ್, ಆದಿತ್ಯ ಠಾಕ್ರೆ ಹಾಗೂ ಏಕನಾಥ್ ಶಿಂಧೆ (ಚಿತ್ರ ಕೃಪೆ – ಏಕನಾಥ್ ಶಿಂಧೆ ಟ್ವಿಟರ್ ಖಾತೆ)
ಶಿವಸೇನಾ ನಾಯಕರಾದ ಸಂಜಯ್ ರಾವುತ್, ಆದಿತ್ಯ ಠಾಕ್ರೆ ಹಾಗೂ ಏಕನಾಥ್ ಶಿಂಧೆ (ಚಿತ್ರ ಕೃಪೆ – ಏಕನಾಥ್ ಶಿಂಧೆ ಟ್ವಿಟರ್ ಖಾತೆ)   

ಮುಂಬೈ:ಎನ್‌ಸಿಪಿ, ಕಾಂಗ್ರೆಸ್ ಕಾರ್ಯವೈಖರಿ ಬಗ್ಗೆಯಷ್ಟೇ ನಮ್ಮ ಅಸಮಾಧಾನ ಹೊರತು, ಶಿವಸೇನಾ ಮುಖ್ಯಸ್ಥರ ಜತೆ ಭಿನ್ನಾಭಿಪ್ರಾಯವಿಲ್ಲ ಎಂದು ಮಹಾರಾಷ್ಟ್ರ ಬಂಡಾಯ ನಾಯಕರು ಹೇಳಿದ್ದಾರೆ.

‘ಮಹಾ ವಿಕಾಸ್ ಅಘಾಡಿ’ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಿವಸೇನಾ ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ತಂಗಿದ್ದಾರೆ.

ಸುದ್ದಿವಾಹಿನಿಯೊಂದರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಸಚಿವ ಸಂದೀಪನ್ ಭುಮರೆ, ‘ಶಿವಸೇನಾ ನಾಯಕತ್ವದ ಬಗ್ಗೆ ನಮ್ಮ ತಕರಾರಿಲ್ಲ. ನಾವು ನಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಳಿ ಪ್ರಸ್ತಾಪಿಸಿದ್ದೇವೆ. ಎನ್‌ಸಿಪಿ ಹಾಗೂ ಕಾಂಗ್ರೆಸ್ ಸಚಿವರ ಜತೆ ಕೆಲಸ ಮಾಡುವುದು ಕಷ್ಟಕರವಾಗಿದೆ. ನಮ್ಮ ಪ್ರಸ್ತಾವನೆಗಳು ಮತ್ತು ಕೆಲಸದ ಮನವಿಗಳಿಗೆ ಆ ಪಕ್ಷಗಳ ಸಚಿವರಿಂದ ಅನುಮೋದನೆ ಪಡೆಯುವುದು ನಮಗೆ ತುಂಬಾ ಕಷ್ಟಕರವಾಗುತ್ತಿದೆ’ ಎಂದು ಹೇಳಿದ್ದಾರೆ.

ತಮಗೆ ವಹಿಸಿರುವ ಖಾತೆ ಬಗ್ಗೆ ತೃಪ್ತಿ ಹೊಂದಿರುವುದಾಗಿಯೂ ಅವರು ಹೇಳಿದ್ದಾರೆ.

ಈ ಮಧ್ಯೆ, ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳು ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿವೆ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಟ್ವೀಟ್ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.