ADVERTISEMENT

ಮೊಟ್ಟೆ ಇಡುವುದನ್ನು ನಿಲ್ಲಿಸಿದ ಕೋಳಿಗಳು: ಠಾಣೆ ಮೆಟ್ಟಿಲೇರಿದ ಸಾಕಣೆದಾರರು

ಪಿಟಿಐ
Published 21 ಏಪ್ರಿಲ್ 2021, 14:43 IST
Last Updated 21 ಏಪ್ರಿಲ್ 2021, 14:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕೋಳಿ ಸಾಕಣೆದಾರರೊಬ್ಬರು ತಮ್ಮ ಕೋಳಿ ಫಾರಂನಲ್ಲಿ ಕೋಳಿಗಳು ಸಂಸ್ಥೆಯೊಂದರ ಆಹಾರ ಸೇವಿಸಿದ ನಂತರ ಮೊಟ್ಟೆ ಇಡುವುದನ್ನು ನಿಲ್ಲಿಸಿವೆ ಎಂದು ಆರೋಪಿಸಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

‘ಈ ಸಂಬಂಧ ಕೋಳಿ ಫಾರ್ಮ್ ಮಾಲೀಕರೊಬ್ಬರು ದೂರು ನೀಡಿದ್ದಾರೆ. ತಮ್ಮ ಪ್ರದೇಶದಲ್ಲಿ ಕನಿಷ್ಠ ನಾಲ್ಕು ಫಾರಂಗಳಲ್ಲಿ ಈ ಸಮಸ್ಯೆ ಕಾಣಿಕೊಂಡಿದೆ ಎಂದಿದ್ದಾರೆ. ಸಮಸ್ಯೆ ಕಾಣಿಸಿರುವ ನಾಲ್ಕು ಕೋಳಿ ಫಾರಂಗಳ ಮಾಲೀಕರಿಗೆ ಪರಿಹಾರ ಪಾವತಿಸಲು ಕೋಳಿ ಆಹಾರ ತಯಾರಿಕ ಸಂಸ್ಥೆ ಒಪ್ಪಿಕೊಂಡಿದೆ. ಹೀಗಾಗಿ ಯಾವುದೇ ಎಫ್‌ಐಆರ್ ದಾಖಲಿಸಿಲ್ಲ’ ಎಂದು ಲೋನಿ ಕಲ್ಬೋರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಂದ್ರ ಮೊಕಾಶಿ ಬುಧವಾರ ತಿಳಿಸಿದ್ದಾರೆ.

ರಾಜ್ಯದ ನೆರೆಯ ಅಹ್ಮದ್‌ನಗರ ಜಿಲ್ಲೆಯ ಕಂಪನಿಯೊಂದರಿಂದ ಕೋಳಿ ಆಹಾರ ಖರೀದಿಸಿರುವುದಾಗಿ ಕೋಳಿ ಫಾರಂ ಮಾಲೀಕ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಕೋವಿಡ್‌ 19 ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಮೊಟ್ಟೆ ಮತ್ತು ಕೋಳಿಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.