ADVERTISEMENT

ಮಹಾರಾಷ್ಟ್ರ | 9 ವರ್ಷದ ಬಾಲಕನಿಂದ 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ

ಪಿಟಿಐ
Published 12 ಆಗಸ್ಟ್ 2025, 7:21 IST
Last Updated 12 ಆಗಸ್ಟ್ 2025, 7:21 IST
   

ಮಹಾರಾಷ್ಟ್ರ; ಯಾವತ್ಮಲ್ ಜಿಲ್ಲೆಯ ಶಾಲೆಯೊಂದರಲ್ಲಿ ಸಹಪಾಠಿ ಬಾಲಕಿಯರ ಸಹಾಯದಿಂದ 9 ವರ್ಷದ ವಿದ್ಯಾರ್ಥಿ, 8 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಹೇಳಲಾಗಿದೆ.

ಯಾವತ್ಮಲ್ ಜಿಲ್ಲೆಯ ಬಾಬುಲ್ಗಾಂವ್ ಪಟ್ಟಣದ ಜಿಲ್ಲಾ ಪರಿಷತ್ ಶಾಲೆಯಲ್ಲಿ ಆಗಸ್ಟ್ 1 ರಂದು, 4ನೇ ತರಗತಿ ವಿದ್ಯಾರ್ಥಿ ತಮ್ಮ ಸಹಪಾಠಿಗಳ ಸಹಾಯದಿಂದ 3ನೇ ತರಗತಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಮುಂದಾಗಿದ್ದಾನೆ.

ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕ – ಬಾಲಕಿಯರನ್ನು ವಶಕ್ಕೆ ಪಡೆದು ನಿರೀಕ್ಷಣಾ ಮಂದಿರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕೆಲವು ದಿನಗಳ ಬಳಿಕ ಬಾಲಕಿಯ ಗುಪ್ತಾಂಗಗಳಲ್ಲಿ ನೋವು ಕಾಣಿಸಿಕೊಂಡಿದ್ದನ್ನು ಆಕೆಯ ತಾಯಿ ಗಮನಿಸಿ, ಬಾಲಕಿಯನ್ನು ವೈದ್ಯರ ಬಳಿ ಕರೆದೊಯ್ದಿದ್ದಾರೆ. ಇದನ್ನು ಗಮನಿಸಿದ ವೈದ್ಯರು ಲೈಂಗಿಕ ದೌರ್ಜನ್ಯ ನಡೆದಿರುವ ಅನುಮಾನ ವ್ಯಕ್ತಪಡಿಸಿದ್ದಾರೆ

ಸಂತ್ರಸ್ತೆಯ ತಾಯಿಯ ದೂರು ನೀಡಿದ್ದು, ‘4ನೇ ತರಗತಿಯ ಬಾಲಕನು ಆತನ ಸಹಪಾಠಿ ಬಾಲಕಿಯರ ನೆರವಿನೊಂದಿಗೆ ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ’ ಎಂದು ಆರೋಪಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.