ನಿಲಾಂಬೆನ್ ಪಾರೆಖ್
ಬೆಂಗಳೂರು: ಮಹಾತ್ಮಾ ಗಾಂಧೀಜಿ ಅವರ ಮರಿಮೊಮ್ಮಗಳು ಹಾಗೂ ಸಮಾಜ ಸೇವಕಿ ನಿಲಾಂಬೆನ್ ಪಾರೆಖ್ ಅವರು ಗುಜರಾತ್‌ನ ನವಸಾರಿಯ ತಮ್ಮ ನಿವಾಸದಲ್ಲಿ ಸೋಮವಾರ ವಯೋಸಹಜವಾಗಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಗಾಂಧೀಜಿ ಅವರ ಹಿರಿಯ ಪುತ್ರ ಹರಿಲಾಲ್ ಗಾಂಧಿ. ಹರಿಲಾಲ್ ಅವರ ಕಿರಿಯ ಪುತ್ರಿ ರಾಮಿಬೆನ್. ರಾಮಿಬೆನ್ ಅವರ ಹಿರಿಯ ಮಗಳೇ ನಿಲಾಂಬೆನ್ ಪಾರೆಖ್.
ನಿಲಾಂಬೆನ್ ಅವರು ‘ದಕ್ಷಿಣಾಪಥ’ ಎಂಬ ಎನ್‌ಜಿಒ ಸ್ಥಾಪಿಸಿದ್ದರು. ಅವರು ಎನ್‌ಜಿಒ ಮೂಲಕ ಬುಡುಕಟ್ಟು ಸಮುದಾಯದ ಹೆಣ್ಣುಮಕ್ಕಳಿಗೆ ಶಿಕ್ಷಣ ಹಾಗೂ ಅವರಿಗೆ ಆರ್ಥಿಕ ಸ್ವಾತಂತ್ರ್ಯ ಒದಗಿಸುವಲ್ಲಿ ಕೆಲಸ ಮಾಡುತ್ತಿದ್ದರು. ಖಾದಿ ಅಭಿಯಾನದ ಮೂಲಕ ಗಾಂಧೀಜಿ ಅವರ ತತ್ವಗಳನ್ನು ಜಾರಿಗೆ ತಂದಿದ್ದರು.
ನಿಲಾಂಬೆನ್ ಅವರು “Gandhi’s lost Jewel: Hiralal Gandhi” ಎಂಬ ಪುಸ್ತಕ ಬರೆದಿದ್ದರು. ಈ ಪುಸ್ತಕ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ಕುಟುಂಬದವರ ಹೇಳಿಕೆ ಆಧರಿಸಿ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.