ADVERTISEMENT

ಪ್ರಿಯಾಂಕಾ ಗಾಂಧಿಯನ್ನು 'ಪಪ್ಪು ಕೀ ಪಪ್ಪೀ' ಎಂದ ಕೇಂದ್ರ ಸಚಿವ ಮಹೇಶ್ ಶರ್ಮಾ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 9:19 IST
Last Updated 18 ಮಾರ್ಚ್ 2019, 9:19 IST
   

ಸಿಖಂದರಾಬಾದ್: 'ಮಮತಾ ಬ್ಯಾನರ್ಜಿ ಇಲ್ಲಿಗೆ ಬಂದು ಕಥಕ್ ಪ್ರದರ್ಶಿಸಿದರೆ ನೋಡುವವರು ಯಾರು? ಕರ್ನಾಟಕದ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಡು ಹಾಡಿದರೆ ಕೇಳುವರು ಯಾರು? ನಾನೂ ಪ್ರಧಾನಿಯಾಗುವೆ ಅಂತಾನೆ ಪಪ್ಪು, ಈಗ ಪಪ್ಪುವಿನ ಪಪ್ಪೀ ಕೂಡಾ ಬಂದಿದ್ದಾಳೆ- ಹೀಗೆ ಹೇಳಿದ್ದು ಕೇಂದ್ರ ಸಚಿವ ಮಹೇಶ್ ಶರ್ಮಾ.

ಸಿಖಂದರಾಬಾದ್‍ನಲ್ಲಿ ಶನಿವಾರ ನಡೆದ ಸಾರ್ವಜನನಿಕ ಕಾರ್ಯಕ್ರಮದಲ್ಲಿ ಗೌತಂ ಬುದ್ಧ ನಗರದ ಸಂಸದ, ಕೇಂದ್ರ ಸಚಿವಶರ್ಮಾ ಈ ರೀತಿ ಹೇಳಿದ್ದಾರೆ,
ಶರ್ಮಾ ಅವರು ತಮ್ಮ ಭಾಷಣದಲ್ಲಿ ರಾಹುಲ್ ಗಾಂಧಿಯನ್ನು ಪಪ್ಪು ಎಂದು ಉಲ್ಲೇಖಿಸಿ ಪ್ರಿಯಾಂಕಾ ಗಾಂಧಿಯನ್ನು ಪಪ್ಪಿ ಎಂದಿದ್ದಾರೆ.
ನಾನು ಸಂಸತ್‍ನಲ್ಲಿ ಕುಳಿತಿದ್ದೆ.ರಾಹುಲ್ ಕಣ್ಣು ಮಿಣುಕಿಸಿದ ರೀತಿ ನೋಡಿ ನಾನು ಅಚ್ಚರಿಗೊಂಡೆ. ಈಗ ಪಪ್ಪು ತಾನು ಪ್ರಧಾನಿಯಾಗಬೇಕೆಂದು ಹೇಳುತ್ತಿದ್ದಾನೆ. ಅದಕ್ಕಾಗಿ ಮಾಯಾವತಿ, ಅಖಿಲೇಶ್ ಯಾದವ್ ಬಂದರು.ಈಗ ಪಪ್ಪುವಿನ ಪಪ್ಪಿ ಕೂಡಾ ಬಂದಿದ್ದಾಳೆ.ಇದಕ್ಕಿಂತ ಮುಂಚೆಪ್ರಿಯಾಂಕಾ ದೇಶದ ಮಗಳು ಆಗಿರಲಿಲ್ಲವೇ? ಆಕೆ ಕಾಂಗ್ರೆಸ್‍ ಪಕ್ಷದ ಮಗಳು ಆಗಿರಲಿಲ್ಲವೇ? ಆಕೆ ಈಗ ಬಂದು ಹೊಸತೇನು ಮಾಡುತ್ತಾಳೆ? ಇದಕ್ಕಿಂತ ಮುನ್ನ ಆಕೆ ಸೋನಿಯಾ ಗಾಂಧಿಯ ಮಗಳಾಗಿರಲಿಲ್ಲವೇ?. ಮೊದಲು ನೆಹರು, ನಂತರ ರಾಜೀವ್, ಸಂಜಯ್ ಆಮೇಲೆ ರಾಹುಲ್, ಈಗ ಪ್ರಿಯಾಂಕಾ. ಇನ್ನೂ ಗಾಂಧಿಗಳು ಇರಬಹುದು ಎಂದು ಶರ್ಮಾ ಹೇಳಿದ ಭಾಷಣದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‌ ಪತ್ರಿಕೆ ಶರ್ಮಾ ಅವರ ಸಂಪರ್ಕಿಸಲು ಯತ್ನಿಸಿದಾಗ ತಾನು ಶ್ರದ್ಧಾಂಜಲಿ ಸಭೆಯೊಂದರಲ್ಲಿ ಭಾಗಿಯಾಗಿರುವುದರಿಂದ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿರವುದಾಗಿ ಪತ್ರಿಕೆ ವರದಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.