ADVERTISEMENT

ರೌಡಿ ಅಜಿತ್ ಸಿಂಗ್ ಕೊಲೆ ಆರೋಪಿಯ ಎನ್‌ಕೌಂಟರ್‌

ಉತ್ತರ ಪ್ರದೇಶ ರಾಜಧಾನಿ ಲಖನೌನ ಖರ್ಗಾಪುರ ಕ್ರಾಸಿಂಗ್‌ ಬಳಿ ನಡೆದ ಘಟನೆ

ಪಿಟಿಐ
Published 15 ಫೆಬ್ರುವರಿ 2021, 9:35 IST
Last Updated 15 ಫೆಬ್ರುವರಿ 2021, 9:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಕುಖ್ಯಾತ ರೌಡಿ ಅಜಿತ್‌ ಸಿಂಗ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿ ಗಿರಿಧಾನಿ ವಿಶ್ವಕರ್ಮ(40) ಅಲಿಯಾಸ್ ವೈದ್ಯ ಸೋಮವಾರ ಉತ್ತರ ಪ್ರದೇಶದ ಪೊಲೀಸರ ಎನ್‌ಕೌಂಟರ್‌ನಲ್ಲಿ ಬಲಿಯಾಗಿದ್ದಾನೆ.

ಆರೋಪಿ ವಿಶ್ವಕರ್ಮನನ್ನು ಪೊಲೀಸರು ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ, ಕೊಲೆ ಘಟನೆ ನಡೆದ ಜಾಗವಾದ ಖರ್ಗಾಪುರ ಕ್ರಾಸಿಂಗ್‌ಗೆ ಕರೆದೊಯ್ದರು.ಪೊಲೀಸ್ ವಾಹನದಿಂದ ಕೆಳಗೆ ಇಳಿಯುವಾಗ ಆರೋಪಿಸಬ್‌ಇನ್ಸ್‌ಪೆಕ್ಟರ್ ಅಖ್ತರ್ ಉಸ್ಮಾನಿ ಮೇಲೆ ಹಲ್ಲೆ ಮಾಡಿ, ಅವರಿಂದ ಪಿಸ್ತೂಲ್ ಕಿತ್ತುಕೊಂಡು, ಕೆಳಕ್ಕೆ ತಳ್ಳಿ ಓಡಲು ಆರಂಭಿಸಿದ.

ಪೊದೆಯೊಳಗೆ ಕುಳಿತ ಆರೋಪಿ ಪೊಲೀಸರತ್ತ ಗುಂಡು ಹಾರಿಸಿದಾಗ ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದರು. ಘಟನೆಯಲ್ಲಿ ಮೂವರು ಪೊಲೀಸರಿಗೆ ಗಾಯವಾಗಿದೆ’ ಎಂದುಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ನೀಲಬ್ಜಾ ಚೌಧರಿ ತಿಳಿಸಿದರು.

ADVERTISEMENT

ಜನವರಿ 6ರಂದು ಲಖನೌ ನಗರದ ಗೋಮತಿ ನಗರ ವ್ಯಾಪ್ತಿಯಲ್ಲಿ ರೌಡಿ ಅಜಿತ್‌ ಸಿಂಗ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಘಟನೆಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.