ADVERTISEMENT

ಮಲೇಷ್ಯಾ ವಿಮಾನ: ಮತ್ತೆ ಶೋಧ ಕಾರ್ಯಕ್ಕೆ ಚಿಂತನೆ

ಏಜೆನ್ಸೀಸ್
Published 3 ಮಾರ್ಚ್ 2019, 19:06 IST
Last Updated 3 ಮಾರ್ಚ್ 2019, 19:06 IST
   

ಕ್ವಾಲಾಲಂಪುರ: ಮಲೇಷ್ಯಾ ಏರ್‌ಲೈನ್ಸ್‌ನ ಕಣ್ಮರೆಯಾಗಿರುವ ಎಂಎಚ್‌ 370 ವಿಮಾನದ ಶೋಧಕಾರ್ಯ ಪುನರಾರಂಭಿಸುವ ಚಿಂತನೆ ಇದೆ ಎಂದು ಮಲೇಷ್ಯಾದ ಸಾರಿಗೆ ಸಚಿವ ಆಂಥೋನಿ ಲೋಕ್‌ ಹೇಳಿದ್ದಾರೆ.

ಅಮೆರಿಕದ ಓಶಿಯನ್‌ ಇನ್ಫಿನಿಟಿ ಸಂಸ್ಥೆ 2018ರಲ್ಲಿ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ವಿಮಾನಕ್ಕಾಗಿ ಶೋಧ ಕಾರ್ಯ ನಡೆಸಿತ್ತು. ಆದರೆ ವಿಮಾನದ ಕುರಿತು ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಉತ್ತಮ ತಂತ್ರಜ್ಞಾನದೊಂದಿಗೆ ಮತ್ತೆ ಶೋಧ ಕಾರ್ಯ ನಡೆಸಲು ಸಿದ್ಧರಿರುವುದಾಗಿ ಸಂಸ್ಥೆಯ ಸಿಇಒ ಒಲಿವರ್‌ ಪ್ಲಂಕೆಟ್‌ ಆಶಯ ವ್ಯಕ್ತಕಪಡಿಸಿದ್ದಾರೆ.

ADVERTISEMENT

239 ಮಂದಿ ಪ್ರಯಾಣಿಸುತ್ತಿದ್ದ ವಿಮಾನ 2014ರ ಮಾರ್ಚ್‌ 8ರಂದು ಕಣ್ಮರೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.