ಮಾಲೇಗಾಂವ್ ಬಾಂಬ್ ಸ್ಫೋಟದ ನಡೆದ ಸ್ಥಳ
ಮುಂಬೈ: 2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಲ್ಲಾ ಏಳು ಆರೋಪಿಗಳನ್ನು ಖುಲಾಸೆಗೊಳಿಸಿರುವ ನ್ಯಾಯಾಲಯವು, ಬಲಪಂಥೀಯ ತೀವ್ರವಾದಿ ಗುಂಪು ‘ಅಭಿನವ್ ಭಾರತ್’ ಈ ಸ್ಫೋಟವನ್ನು ನಡೆಸಿದೆ ಎಂಬ ಪ್ರಾಸಿಕ್ಯೂಷನ್ ವಾದವನ್ನು ತಳ್ಳಿಹಾಕಿದೆ.
‘ಸರ್ಕಾರವು ಸಂಘಟನೆಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿಲ್ಲ’ ಎಂದು ಒತ್ತಿ ಹೇಳಿದೆ.
1 ಸಾವಿರ ಪುಟಗಳ ತೀರ್ಪು ಪ್ರಕಟಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ.ಕೆ.ಲಹೋಟಿ,‘ ಆರೋಪಿಗಳೆಲ್ಲರೂ ‘ಅಭಿನವ್ ಭಾರತ್’ ಸಂಘಟನೆಯ ಸದಸ್ಯರಾಗಿದ್ದು, ಸಂಘಟಿತ ಅಪರಾಧದ ಗುಂಪಿನ ಸದಸ್ಯರಾಗಿದ್ದರು ಎಂಬುದನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆ (ಎಟಿಎಸ್) ತನ್ನ ತನಿಖೆಯಲ್ಲಿ ಉಲ್ಲೇಖಿಸಿತ್ತು.
ಆದರೆ, ಸಂಘಟನೆಯನ್ನು ಇದುವರೆಗೂ, ಘೋಷಿತ ಭಯೋತ್ಪಾದಕ ಸಂಘಟನೆ ಎಂದು ಕೇಂದ್ರ ಸರ್ಕಾರ ಘೋಷಿಸಿಲ್ಲ. ಅಭಿನವ್ ಭಾರತ್ ಟ್ರಸ್ಟ್ ಅಥವಾ ಸಂಸ್ಥಾ, ಸಂಘಟನೆ ಹಾಗೂ ಫೌಂಡೇಶನ್ ನಿಷೇಧಿತ ಸಂಘಟನೆಯಲ್ಲ’ ಎಂದು ನ್ಯಾಯಾಲಯವು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.