
ಪಿಟಿಐ
ನವದೆಹಲಿ: ‘ಕೆಲಸದ, ಮತದಾನದ ಮತ್ತು ಘನತೆಯಿಂದ ಬದುಕುವ ಹಕ್ಕು ಸೇರಿ ದುರ್ಬಲರ ಹಕ್ಕುಗಳನ್ನು ರಕ್ಷಿಸಲು ಹೊಸ ವರ್ಷವನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಎಂಜಿಎನ್‌ಆರ್‌ಇಜಿಎ ರದ್ಧತಿ, ಕುಸಿಯುತ್ತಿರುವ ರೂಪಾಯಿ ಮೌಲ್ಯ, ಎಸ್‌ಐಆರ್ ಕಸರತ್ತು ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಸೇರಿ ಬಿಜೆಪಿ ಸರ್ಕಾರದ 11 ವರ್ಷಗಳ ಆಡಳಿತ ಅವಧಿಯಲ್ಲಿ ದೇಶ ಎದುರಿಸುತ್ತಿರುವ ಪ್ರಮುಖ 14 ಸಮಸ್ಯೆಗಳನ್ನು ಖರ್ಗೆ ‘ಎಕ್ಸ್’ ಪೋಸ್ಟ್‌ನಲ್ಲಿ ಪಟ್ಟಿ ಮಾಡಿದ್ದಾರೆ.
ಎಲ್ಲರೂ ಕೈಜೋಡಿಸಿ ಸಂವಿಧಾನದ ರಕ್ಷಣೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಳ್ಳುವ ಆಶಯವನ್ನು ಅವರ ಹೊಸ ವರ್ಷದ ಪೋಸ್ಟ್ ಒಳಗೊಂಡಿದೆ.