ADVERTISEMENT

‘ಡಿಎಂಕೆ ಶಾಸಕರನ್ನು ಬಿಜೆಪಿ ಖರೀದಿಸಲಾಗದು’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 18:25 IST
Last Updated 2 ಏಪ್ರಿಲ್ 2021, 18:25 IST
ಖರ್ಗೆ
ಖರ್ಗೆ   

ಕೊಯಮತ್ತೂರು (ಪಿಟಿಐ): ಅಧಿಕಾರದಾಹದ ಬಿಜೆಪಿಯು ಬೇರೆ ರಾಜ್ಯಗಳಲ್ಲಿ ಮಾಡಿದಂತೆ ಡಿಎಂಕೆ ನೇತೃತ್ವದ ಮೈತ್ರಿಕೂಟದ ಒಬ್ಬ ಶಾಸಕನನ್ನೂ ಖರೀದಿಸುವುದು ಸಾಧ್ಯವಿಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳಿದ್ದಾರೆ.

ಬಿಜೆಪಿಯು ಪಕ್ಷಾಂತರಕ್ಕೆ ಪ್ರಚೋದನೆ ನೀಡುತ್ತಿದೆ. ಗೋವಾ, ಮಣಿಪುರ, ಕರ್ನಾಟಕ ಮತ್ತು ಮಧ್ಯ ಪ್ರದೇಶದಲ್ಲಿ ಶಾಸಕರನ್ನು ಖರೀದಿಸುವ ಮೂಲಕ ಸರ್ಕಾರಗಳನ್ನು ಉರುಳಿಸಿದೆ. ತಮಿಳುನಾಡಿನ ಶಾಸಕರು ವಿದ್ಯಾವಂತರು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ಅವರನ್ನು ಖರೀದಿಸಲಾಗದು ಎಂದು ಖರ್ಗೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಬಿಜೆಪಿ ವಿಷಪೂರಿತ ಹಾವು. ಧರ್ಮ ಮತ್ತು ಜಾತಿಯ ಆಧಾರದಲ್ಲಿ ಜನರನ್ನು ವಿಭಜಿಸುವ ಆರ್‌ಎಸ್ಎಸ್‌ ಸಿದ್ಧಾಂತವನ್ನು ಬಿಜೆಪಿ ಅನುಷ್ಠಾನಗೊಳಿಸುತ್ತಿದೆ.ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಎರಡು ದಿನಗಳ ಹಿಂದೆ ಭೇಟಿ ನೀಡಿದ್ದಾಗ ನಡೆದ ಹಿಂಸಾಚಾರವೇ ಇದಕ್ಕೆ ಸಾಕ್ಷಿ. ನೋಟು ರದ್ದತಿ ಮತ್ತು ಜಿಎಸ್‌ಟಿಯಂತಹ ಕ್ರಮಗಳಿಂದಾಗಿ ಜನರ ಜೀವನವೇ ದುಸ್ತರವಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.