ADVERTISEMENT

ಲಕ್ಷ ಲಕ್ಷ‌ ಜನರಿಗೆ‌ ಕ್ವಾರಂಟೈನ್ ಮಾಡಲಾಗದು ಎಂದಿದ್ದೇಕೆ ಮಮತಾ ಬ್ಯಾನರ್ಜಿ?

ಏಜೆನ್ಸೀಸ್
Published 28 ಏಪ್ರಿಲ್ 2020, 4:47 IST
Last Updated 28 ಏಪ್ರಿಲ್ 2020, 4:47 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಲಕ್ಷ ಲಕ್ಷ‌ ಜನರಿಗೆ ಕ್ವಾರಂಟೈನ್‌ಗೆ ಸೌಕರ್ಯ ಒದಗಿಸುವ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ರಾಜ್ಯದ ವಿವಿಧೆಡೆ ಸಿಲುಕಿಕೊಂಡಿರುವ ಜನರಿಗೆ ಮನೆಗೆ ಮರಳಲು ಎಲ್ಲ ರೀತಿಯ ನೆರವು ಒದಗಿಸಲು ಸಿದ್ಧ ಎಂದು ಸೋಮವಾರ ಅವರು ಹೇಳಿದ್ದರು.

‘ನಾವೊಂದು ನಿರ್ಧಾರ ಕೈಗೊಂಡಿದ್ದೇವೆ. ವ್ಯಕ್ತಿಯೊಬ್ಬರಲ್ಲಿ ಕೋವಿಡ್–19 ದೃಢಪಟ್ಟರೆ ಆ ವ್ಯಕ್ತಿ ಅವರ ಮನೆಯಲ್ಲೇ ಪ್ರತ್ಯೇಕ ವಾಸ ಮಾಡಬಹುದು’ ಎಂದು ಮಮತಾ ಹೇಳಿದ್ದಾರೆ.

‘ಲಕ್ಷ ಲಕ್ಷ ಜನರನ್ನು ಕ್ವಾರಂಟೈನ್ ಮಾಡಲಾಗದು. ಸರ್ಕಾರಕ್ಕೆ ಅದರದ್ದೇ ಆದ ಮಿತಿ ಇದೆ’ ಅವರು ಹೇಳಿದ್ದಾರೆ.

ADVERTISEMENT

‘ಲಾಕ್‌ಡೌನ್‌ನಿಂದಾಗಿ ರಾಜ್ಯದ ವಿವಿಧೆಡೆ ಸಿಲುಕಿಕೊಂಡಿರುವ ಜನರಿಗೆ ಮನೆಗೆ ಮರಳಲು ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನಿಲ್ಲಿ ಇರುವವರೆಗೂ ಬಂಗಾಳದ ಯಾರೂ ಅಸಹಾಯಕರೆಂದು ಭಾವಿಸಬೇಕಿಲ್ಲ. ನಿಮ್ಮ ಕಷ್ಟದ ದಿನಗಳಲ್ಲಿ ನಮ್ಮ ಜತೆ ನಾನಿದ್ದೇನೆ’ ಎಂದು ಮಮತಾ ಸೋಮವಾರ ಟ್ವೀಟ್ ಮಾಡಿದ್ದರು.

ಕೋಟಾದಲ್ಲಿ ಸಿಲುಕಿರುವ ಬಂಗಾಳದ ವಿದ್ಯಾರ್ಥಿಗಳು ಶೀಘ್ರವೇ ವಾಪಸಾಗಲಿದ್ದಾರೆ ಎಂದೂ ಅವರು ಹೇಳಿದ್ದರು. ‘ನಾನೇ ಖುದ್ದಾಗಿ ಇದರ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದೇನೆ. ಪ್ರತಿಯೊಬ್ಬರಿಗೂ ಸಹಾಯ ಮಾಡುತ್ತೇವೆ. ಈಗಾಗಲೇ ಈ ಕೆಲಸ ಆರಂಭವಾಗಿದೆ. ಕೋಟಾದಲ್ಲಿ ಸಿಲುಕಿರುವ ಬಂಗಾಳದ ವಿದ್ಯಾರ್ಥಿಗಳು ಶೀಘ್ರದಲ್ಲೇ ಮರುಪ್ರಯಾಣ ಆರಂಭಿಸಲಿದ್ದಾರೆ’ ಎಂದೂ ಅವರು ಟ್ವೀಟ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.