ADVERTISEMENT

ಬಂಗಾಳ ಚುನಾವಣೆ| ಅಮಿತ್‌ ಶಾ ಇವಿಎಂ ಒಳಗೆ ಪ್ರವೇಶ ಮಾಡಿದ್ದಾರಾ? ಮಮತಾ ವ್ಯಂಗ್ಯ

ಏಜೆನ್ಸೀಸ್
Published 28 ಮಾರ್ಚ್ 2021, 14:07 IST
Last Updated 28 ಮಾರ್ಚ್ 2021, 14:07 IST
ಮಮತಾ ಬ್ಯಾನರ್ಜಿ ಮತ್ತು ಅಮಿತ್‌ ಶಾ
ಮಮತಾ ಬ್ಯಾನರ್ಜಿ ಮತ್ತು ಅಮಿತ್‌ ಶಾ    

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ನಡೆದ 30 ಸ್ಥಾನಗಳ ಪೈಕಿ 26 ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ ಎಂಬ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೇಲಿ ಮಾಡಿದ್ದಾರೆ.

'ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಯು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಪಶ್ಚಿಮ ಬಂಗಾಳದ ಮೊದಲ ಹಂತದ ಚುನಾವಣೆ ನಡೆದ 30 ಸ್ಥಾನಗಳಲ್ಲಿ ಬಿಜೆಪಿ 26ರಲ್ಲಿ ಗೆಲ್ಲಲಿದೆ. ಅಸ್ಸಾಂನಲ್ಲಿ 37 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸುವ ವಿಶ್ವಾಸ ಹೊಂದಿದೆ,' ಎಂದು ಅಮಿತ್‌ ಶಾ ನವದೆಹಲಿಯಲ್ಲಿ ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ಮೊದಲ ಹಂತದಲ್ಲಿ ಮತದಾನ ನಡೆದ 30 ಸ್ಥಾನಗಳಲ್ಲಿ 26 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ. ನೀವು (ಗೃಹ ಸಚಿವ ಅಮಿತ್‌ ಶಾ ಅಮಿತ್ ಶಾ) ಇವಿಎಂ ಪ್ರವೇಶಿಸಿದ್ದೀರಾ? ಎಲ್ಲಾ 30 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ನೀವು ಯಾಕೆ ಹೇಳಲಿಲ್ಲ. ಉಳಿದ ಸೀಟುಗಳನ್ನು ಕಾಂಗ್ರೆಸ್‌-ಎಡಪಕ್ಷಗಳು ಗೆಲ್ಲುತ್ತವೆಯೇ? ಮೇ 2ರ ವರೆಗೆ ಕಾಯೋಣ. ಆಗ ಟಿಎಂಸಿ ಗೆದ್ದಿರುತ್ತದೆ. ಹೊರಗಿನವರು ಬಂಗಾಳವನ್ನು ಆಳಲು ಸಾಧ್ಯವಿಲ್ಲ,' ಎಂದು ಅವರು ಚಂಡೀಪುರದಲ್ಲಿ ಚುನಾವಣೆ ಪ್ರಚಾರದ ವೇಳೆ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.