ADVERTISEMENT

ಮಮತಾಗೆ ಬಂಗಾಳಿ ಮುಸ್ಲಿಮರ ಚಿಂತೆ: ಹಿಮಂತ್ ಬಿಸ್ವಾ ಶರ್ಮಾ ಟೀಕೆ

ಪಿಟಿಐ
Published 18 ಜುಲೈ 2025, 14:35 IST
Last Updated 18 ಜುಲೈ 2025, 14:35 IST
ಹಿಮಂತ್ ಬಿಸ್ವಾ ಶರ್ಮಾ
ಹಿಮಂತ್ ಬಿಸ್ವಾ ಶರ್ಮಾ   

ಗುವಾಹಟಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಳಿ ಭಾಷೆ ಮಾತನಾಡುವ ಮುಸ್ಲಿಮರ ಬಗ್ಗೆ ಮಾತ್ರ ಕಾಳಜಿ ಹೊಂದಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಟೀಕಿಸಿದ್ದಾರೆ.

ಬಂಗಾಳಿ ಮಾತನಾಡುವ ವಲಸಿಗರನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ‘ಅಕ್ರಮ ಬಾಂಗ್ಲಾದೇಶಿಗರು’ ಅಥವಾ ರೋಹಿಂಗ್ಯಾ ಎಂದು ಗುರಿಯಾಗಿಸಲಾಗುತ್ತಿದೆ ಎಂಬ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಹಿಮಂತ್ ಬಿಸ್ವಾ ಪ್ರತಿಕ್ರಿಯಿಸಿದರು.‘ ಬಂಗಾಳಿ ಮುಸ್ಲಿಮರ ಪರವಾಗಿ ನೀವು ಅಸ್ಸಾಂಗೆ ಬಂದರೆ ಅಸ್ಸಾಮಿಗಳು ಮತ್ತು ಬಂಗಾಳಿ ಹಿಂದೂಗಳು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಅವರು ಹೇಳಿದರು.

‘ಬಂಗಾಳಿ ಭಾಷೆ ಮಾತನಾಡುವವರ ರಕ್ಷಣೆ ಬಗ್ಗೆ ಮಮತಾ ಅವರಿಗೆ ಕಳಕಳಿ ಇದ್ದರೆ, ಅವರು ತಮ್ಮ ರಾಜ್ಯದಲ್ಲಿ ನಾಗರಿಕ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ಜಾರಿಗೆ ತರಲಿಲ್ಲವೇಕೆ’ ಎಂದು ಬಿಸ್ವಾ ಪ್ರಶ್ನಿಸಿದರು.

ADVERTISEMENT

‘ಅಸ್ಸಾಂನಲ್ಲಿ ಬಂಗಾಳಿ ಹಿಂದೂಗಳನ್ನು ರಕ್ಷಿಸುತ್ತಿರುವುದು ಮಾತ್ರವಲ್ಲ. ಅವರದ್ದೇ ಸಚಿವರೂ, ಶಾಸಕರೂ ಇದ್ದಾರೆ. ಬಂಗಾಳಿ ಮತ್ತು ಅಸ್ಸಾಮಿಗಳಲ್ಲಿ ಯಾವುದೇ ಭೇದವಿಲ್ಲ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.