ADVERTISEMENT

ಆಯೋಗದ ಸಭೆಗೆ ಹಾಜರಾಗಲ್ಲ: ಮಮತಾ ಬ್ಯಾನರ್ಜಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 18:24 IST
Last Updated 7 ಜೂನ್ 2019, 18:24 IST
   

ಕೋಲ್ಕತ್ತ: ಜೂನ್‌ 15ರಂದು ನಡೆಯಲಿರುವ ‘ನೀತಿ ಆಯೋಗ’ದ ಸಭೆಗೆ ಹಾಜರಾಗದಿರಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀರ್ಮಾನಿಸಿದ್ದಾರೆ.

ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವ ಮಮತಾ, ‘ರಾಜ್ಯಗಳಿಗೆ ಹಣಕಾಸು ನೆರವು ಒದಗಿಸುವ ಅಧಿಕಾರ ನೀತಿ ಆಯೋಗಕ್ಕೆ ಇಲ್ಲದಿರುವುದರಿಂದ ಇಂಥ ಸಭೆಯಲ್ಲಿ ಪಾಲ್ಗೊಳ್ಳುವುದು ಅರ್ಥಹೀನ’ ಎಂದಿದ್ದಾರೆ.

ಯೋಜನಾ ಆಯೋಗವನ್ನು ರದ್ದುಮಾಡಿ, ನೀತಿ ಆಯೋಗ ರಚಿಸುವ ಎನ್‌ಡಿಎ ಸರ್ಕಾರದ ತೀರ್ಮಾನವನ್ನು ಮಮತಾ ಅವರು ಹಿಂದೆಯೇ ವಿರೋಧಿಸಿದ್ದರು. ಈ ಹಿಂದೆಯೂ ಅವರು ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.