ADVERTISEMENT

ಮಥುರಾ: ತನಗೆ ಕಚ್ಚಿದ್ದ ಹಾವನ್ನು ಜೇಬಲ್ಲಿಟ್ಟುಕೊಂಡು ಆಸ್ಪತ್ರೆಗೆ ಬಂದ ವ್ಯಕ್ತಿ

ಪಿಟಿಐ
Published 13 ಜನವರಿ 2026, 14:00 IST
Last Updated 13 ಜನವರಿ 2026, 14:00 IST
<div class="paragraphs"><p>ಹಾವು</p></div>

ಹಾವು

   

ಮಥುರಾ (ಉತ್ತರ ಪ್ರದೇಶ): ತನಗೆ ಕಚ್ಚಿದ 1.5 ಅಡಿ ಉದ್ದದ ಹಾವನ್ನು ಜೇಬಿನಲ್ಲಿ ಇಟ್ಟುಕೊಂಡು ಆಟೊ ಚಾಲಕರೊಬ್ಬರು ಮಥುರಾದ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ದೀಪಕ್‌ (39) ಅವರಿಗೆ ‌ಸೋಮವಾರ ಹಾವು ಕಚ್ಚಿದ್ದು, ವಿಷ ನಿರೋಧಕ ಚುಚ್ಚುಮದ್ದಿಗಾಗಿ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಕಚ್ಚಿದ ಹಾವಿನ ಬಗ್ಗೆ ಕೇಳಿದಾಗ, ಜೇಬಿನಿಂದ ಹಾವು ತೆಗೆದು ತೋರಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ADVERTISEMENT

30 ನಿಮಿಷಗಳ ಹಿಂದೆಯೇ ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಯಲ್ಲಿ ಯಾವುದೇ ಸೌಲಭ್ಯವಿಲ್ಲ ಎಂದು ದೀಪಕ್‌ ಆರೋಪಿಸಿದ್ದಾರೆ.

ಇತರ ರೋಗಿಗಳಿಗೆ ತೊಂದರೆಯಾಗಬಾರದು ಎಂದು ಹಾವನ್ನು ಹೊರಗೆ ಬಿಡಲು ದೀಪಕ್‌ ಅವರಿಗೆ ತಿಳಿಸಲಾಯಿತು. ಬಳಿಕ ಹಾವನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.