ಜೈಸಲ್ಮೇರ್: ‘ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬನನ್ನು ಬೇಹುಗಾರಿಕೆ ನಡೆಸಿದ ಆರೋಪದಡಿ ಭಾರತೀಯ ಸೇನೆಯ ಗುಪ್ತಚರ ಇಲಾಖೆಯು ಬಂಧಿಸಿದೆ’ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
‘ಶಂಕಿತನನ್ನುಬಸನ್‌ಪೀರ್ ನಿವಾಸಿ ಭಾಯಿ ಖಾನ್ ಎಂದು ಗುರುತಿಸಲಾಗಿದೆ. ಈತನ ಚಟುವಟಿಕೆ ಮೇಲೆ ಹಲವು ದಿನಗಳಿಂದ ಗುಪ್ತಚರ ಇಲಾಖೆಯು ನಿಗಾ ಇರಿಸಿತ್ತು. ಶನಿವಾರ ರಾತ್ರಿ ಟಿಎಸ್‌ಪಿ ಗೇಟ್ ಬಳಿ ಆರೋಪಿಯನ್ನು ಸೇನೆಯು ಬಂಧಿಸಿದೆ’ ಎಂದು ಅವರು ಹೇಳಿದರು.
‘ಶಂಕಿತ ವ್ಯಕ್ತಿ ಕ್ಯಾಂಟೀನ್ ನಡೆಸುತ್ತಿದ್ದರಿಂದ ಆತ ಸುಲಭವಾಗಿ ಸೇನಾ ಪ್ರದೇಶಕ್ಕೆ ಹೋಗಿ, ಬರುತ್ತಿದ್ದ. ಶ್ರೀಲಂಕಾ, ಪಾಕಿಸ್ತಾನ, ಲಂಡನ್ ಮತ್ತು ಆಸ್ಟ್ರೇಲಿಯಾದ ಹಲವಾರು ಅನುಮಾನಾಸ್ಪದ ದೂರವಾಣಿ ಸಂಖ್ಯೆಗಳು ಆತನ ಮೊಬೈಲ್ ಫೋನ್‌ನಲ್ಲಿ ಪತ್ತೆಯಾಗಿವೆ’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.