ADVERTISEMENT

ದೆಹಲಿ ಲೀಲಾ ಪ್ಯಾಲೇಸ್ ಹೋಟೆಲ್‌ಗೆ ₹23 ಲಕ್ಷ ಬಿಲ್ ಪಾವತಿಸದೇ ಪರಾರಿಯಾದ ವ್ಯಕ್ತಿ!

ಐಎಎನ್ಎಸ್
Published 17 ಜನವರಿ 2023, 9:51 IST
Last Updated 17 ಜನವರಿ 2023, 9:51 IST
ಲೀಲಾ ಪ್ಯಾಲೇಸ್ ಹೋಟೆಲ್‌
ಲೀಲಾ ಪ್ಯಾಲೇಸ್ ಹೋಟೆಲ್‌   

ನವದೆಹಲಿ: ವಿದೇಶಿ ವ್ಯಕ್ತಿಯೊಬ್ಬ ದೆಹಲಿಯ ಪ್ರತಿಷ್ಠಿತ ಲೀಲಾ ಪ್ಯಾಲೇಸ್ ಹೋಟೆಲ್‌ಗೆ ಬರೋಬ್ಬರಿ ₹23 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ಯುಎಇ ದೇಶದ ಉನ್ನತಾಧಿಕಾರಿ ಎಂದು ಹೇಳಿಕೊಂಡಿದ್ದ ಮಹಮ್ಮದ್ ಶರೀಫ್ ಎನ್ನುವ ವ್ಯಕ್ತಿ ₹23,46,413 ಬಿಲ್ ಅನ್ನು ದೆಹಲಿಯ ಸರೋಜಿನಿ ನಗರದಲ್ಲಿರುವ ಲೀಲಾ ಪ್ಯಾಲೇಸ್ ಹೋಟೆಲ್‌ಗೆ ಪಾವತಿಸದೇ ಪರಾರಿಯಾಗಿದ್ದಾನೆ.

ಮಹಮ್ಮದ್ ಶರೀಫ್ ಆಗಸ್ಟ್‌ 1 ರಿಂದ ನವೆಂಬರ್ 20ರವರೆಗೆ ಹೋಟೆಲ್‌ನಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ತಂಗಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಲೀಲಾ ಪ್ಯಾಲೇಸ್ ಹೋಟೆಲ್ ಮ್ಯಾನೇಜರ್ ನೀಡಿದ ದೂರಿನನ್ವಯ ಎಫ್‌ಐಆರ್ ದಾಖಲಾಗಿದೆ.

ADVERTISEMENT

ಮಹಮ್ಮದ್ ಶರೀಫ್ ಯುಎಇ ಸುಲ್ತಾನ್‌ ಶೇಕ್ ಫಲ್ಹಾ ಬಿನ್ ಜಾಯೇದ್ ಅಲ್ ನಹ್ಯಾನ್ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹೋಟೆಲ್‌ಗೆ ನಂಬಿಸಲು ಆರಂಭದಲ್ಲಿ ಮಹಮ್ಮದ್ ಶರೀಫ್ ₹11.5 ಲಕ್ಷ ಹಣ ಪಾವತಿಸಿದ್ದ. ಆದರೆ, ಬಾಕಿ ₹23 ಲಕ್ಷ ಪಾವತಿಸದೇ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ದೂರು ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ಮಹಮ್ಮದ್ ಷರೀಫ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.