ADVERTISEMENT

ಗುಂಪುದಾಳಿ: ಒಬ್ಬ ಸಾವು, ಇಬ್ಬರಿಗೆ ಗಾಯ

ಪಿಟಿಐ
Published 6 ಸೆಪ್ಟೆಂಬರ್ 2018, 19:50 IST
Last Updated 6 ಸೆಪ್ಟೆಂಬರ್ 2018, 19:50 IST

ಮೇದಿನಿನಗರ (ಜಾರ್ಖಂಡ್): ಮದುವೆಗೆ ಸಿದ್ಧತೆ ನಡೆಸಿದ್ದ ವಧುವಿನ ಮನೆಯೊಂದನ್ನುಪ್ರವೇಶಿಸಿದ ಮೂವರನ್ನು ಕಳ್ಳರೆಂದು ಶಂಕಿಸಿ ಗುಂಪುದಾಳಿ ನಡೆಸಿದ್ದು, ಒಬ್ಬ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ.

ರಾಂಚಿಯಿಂದ 200 ಕಿ.ಮೀ ದೂರದಲ್ಲಿರುವತಿಸಿಬಾರ್ ಗ್ರಾಮದಲ್ಲಿಈ ಘಟನೆ ನಡೆದಿದೆ. ಈ ಸಂಬಂಧ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಮನೆ ಪ್ರವೇಶಿಸಿದ ಮೂವರು, ಕಳ್ಳರೆಂದುವಧುವಿನ ಕುಟುಂಬದ ಸದಸ್ಯರೊಬ್ಬರು ಸುದ್ದಿ ಹಬ್ಬಿಸಿದ ನಂತರ ಗುಂಪುದಾಳಿ ನಡೆದಿದೆ. ಕೌಟುಂಬಿಕ ಕಲಹವೇ ಈ ರೀತಿ ಸುದ್ದಿ ಹಬ್ಬಿಸಲು ಕಾರಣ ಎಂದು ಶಂಕಿಸಲಾಗಿದೆ. ಮೃತಪಟ್ಟ 26 ವರ್ಷದ ವ್ಯಕ್ತಿ ಹಾಗೂ ಇಬ್ಬರು ಗಾಯಾಳುಗಳು ಅದೇ ಗ್ರಾಮದವರು’ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.