ಗರ್ವಾ: ಮಲಗುಂಡಿ ಶುಚಿಗೊಳಿಸುತ್ತಿದ್ದ ವೇಳೆ ಉಸಿರುಗಟ್ಟಿ ನಾಲ್ವರು ಸಾವಿಗೀಡಾಗಿರುವ ಘಟನೆ ಜಾರ್ಖಂಡ್‌ನ ಗಢವಾ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ನವಾಡ ಗ್ರಾಮದಲ್ಲಿ ಅವಘಡ ನಡೆದಿದೆ. ಮೃತರಲ್ಲಿ ಮೂವರು ಸಹೋದರರು ಎಂದು ಡಿಐಜಿ ನೌಶದ್ ಆಲಂ ತಿಳಿಸಿದರು.
ಅಜಯ್ ಚೌಧರಿ (50), ಚಂದ್ರಶೇಖರ ಚೌಧರಿ (42), ರಾಜು ಶೇಖರ ಚೌಧರಿ (55) ಹಾಗೂ ಮಾಲ್ಟೂ ರಾಮ್ ಮೃತರು.
ಮಲಗುಂಡಿಯ ಮುಚ್ಚಳ ತೆರೆದ ಬಳಿಕ ಅದರಿಂದ ಹೊರಬಂದ ವಿಷಕಾರಿ ಅನಿಲ ಸೇವಿಸಿ ನಾಲ್ವರು ಮೃತಪಟ್ಟಿದ್ದಾರೆ.
ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮೂವರು ಸಾವು:
ಮಹಾರಾಷ್ಟ್ರದ ಪುಣೆಯ ಸಮೀಪದ ನಿಗ್ಡಿಯಲ್ಲಿ, ಮ್ಯಾನ್ ಹೋಲ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಮೂವರು ಕಾರ್ಮಿಕರು ಉಸಿರುಗಟ್ಟಿ ಶುಕ್ರವಾರ ಮೃತಪಟ್ಟಿದ್ದಾರೆ.
ಪಿಂಪ್ರಿ–ಚಿಂಚ್ವಡದಲ್ಲಿ ಘಟನೆ ಸಂಭವಿಸಿದೆ. ಮೃತರು ದತ್ತಾ ಹೋಲಾರೆ, ಲಖನ್ ಧಾವ್ರೆ ಹಾಗೂ ಸಾಹೇಬ್‌ರಾವ್ ಗಿರ್ಸೆಪ್ ಎಂದು ಗುರುತಿಸಲಾಗಿದೆ ಮೃತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.