ಇಂಫಾಲ್: ಮಣಿಪುರದ ಚುರಾಚಾಂದಪುರ ಜಿಲ್ಲೆಯಲ್ಲಿರುವ ಥಾಂಗ್ಜಿಂಗ್ ಬೆಟ್ಟ ಹತ್ತದಂತೆ ಕುಕಿ–ಜೋ ಸಂಘಟನೆಗಳು ಮೈತೇಯಿ ಸಮುದಾಯಕ್ಕೆ ಎಚ್ಚರಿಕೆ ನೀಡಿವೆ.
‘ಮೈತೇಯಿಗಳು ಪವಿತ್ರ ಬೆಟ್ಟ ಏರುವ ಪ್ರಯತ್ನ ನಡೆಸಿದರೆ, ಅದನ್ನು ನಮಗೊಡ್ಡುವ ನೇರ ಸವಾಲು ಎಂದೇ ಪರಿಗಣಿಸಲಾಗುವುದು. ನಮ್ಮೆಲ್ಲ ಶಕ್ತಿ ಬಳಸಿ ತಡೆಯುತ್ತೇವೆ’ ಎಂದು ಆರು ಕುಕಿ– ಜೋ ಗುಂಪುಗಳು ಪ್ರಕಟಣೆಯಲ್ಲಿ ತಿಳಿಸಿವೆ.
ಏಪ್ರಿಲ್ ತಿಂಗಳಲ್ಲಿ ತಮ್ಮ ಪವಿತ್ರ ಸ್ಥಳವಾದ ಥಾಂಗ್ಜಿಂಗ್ ಬೆಟ್ಟ ಶ್ರೇಣಿಯಲ್ಲಿರುವ ಚಿಂಗಾ ಕಾಬಾಗೆ ಮೈತೇಯಿ ಜನರು ಭೇಟಿ ನೀಡಲಿದ್ದಾರೆ ಎಂಬ ಊಹಾಪೋಹಗಳಿದ್ದು, ಕುಕಿ ಸಂಘಟನೆಗಳು ಇದನ್ನು ಖಂಡಿಸಿ ಎಚ್ಚರಿಕೆ ನೀಡಿವೆ.
‘ಕೇಂದ್ರ ಸರ್ಕಾರ ಹಾಗೂ ಕುಕಿ– ಜೋ ಸಮುದಾಯದ ನಡುವಿನ ಮಾತುಕತೆ ಫಲಪ್ರದಾಯಕವಾಗಿಲ್ಲ. ಅದಕ್ಕೂ ಮುನ್ನವೇ ಕುಕಿ– ಜೋ ನೆಲವನ್ನು ಪ್ರವೇಶಿಸಲು ಮೈತೇಯಿಗಳಿಗೆ ಯಾವುದೇ ನ್ಯಾಯಾಧಿಕಾರವಿಲ್ಲ’ ಎಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.