
ಇಂಫಾಲ್: ಇಬ್ಬರು ಮಹಿಳೆಯರು ಸೇರಿದಂತೆ ನಿಷೇಧಿತ ಸಂಘಟನೆಗಳಿಗೆ ಸೇರಿದ ಆರು ಉಗ್ರರನ್ನು ಶನಿವಾರ ಬಂಧಿಸಲಾಗಿದೆ.
ಇಂಫಾಲ್ ಪೂರ್ವ ಜಿಲ್ಲೆಯ ಮೊಯಿರಾಂಗ್ಕಂಪು ಸಜೆಬ್ ಮಖಾ ಲೀಕೈ ಪ್ರದೇಶದಿಂದ ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್‌ನ (ಕೊಯಿರೆಂಗ್) ತಖೆಲ್ಲಂಬಂ ಸನಾತೋಯ್ ಚಾನು (19), ಕೊಂಗ್ಬ್ರೈಲತ್ಪಂ ರಮೇಶೋರಿ ದೇವಿ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಕ್ಯಾಂಚಿಪುರ್ ಪ್ರದೇಶದಿಂದ ಪ್ರಿಪಾಕ್‌ನ (ಪ್ರೊ) ಕ್ಷೇತ್ರಿಮಯುಂ ಅಬಿನಾಶ್ ಸಿಂಗ್, ರಾಜ್‌ಕುಮಾರ್ ಡೇನಿಯಲ್ ಸಿಂಗ್ ಎಂಬುವರನ್ನು ಬಂಧಿಸಿದ್ದು, ಅವರಿಂದ ಪಿಸ್ತೂಲು, ಮದ್ದುಗುಂಡುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.
ಯುಎನ್‌ಎಲ್‌ಎಫ್‌ನ (ಪಿ) ಸಕ್ರಿಯ ಕಾರ್ಯಕರ್ತನೊಬ್ಬನನ್ನು ಇಂಫಾಲ್ ಪಶ್ಚಿಮ ಜಿಲ್ಲೆಯ ಲ್ಯಾಂಫೆಲ್ ಸೂಪರ್ ಮಾರ್ಕೆಟ್‌ನಿಂದ ಹಾಗೂ ಪ್ರೆಪಾಕ್‌ನ ದಂಗೆಕೋರನನ್ನು ಬಿಷ್ಣುಪುರ ಜಿಲ್ಲೆಯ ಕುಂಬಿಯಲ್ಲಿರುವ ಆತನ ನಿವಾಸದಲ್ಲಿ ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.