ಬಂಧನ (ಸಾಂದರ್ಭಿಕ ಚಿತ್ರ)
ಇಂಫಾಲ್: ಇಂಫಾಲ್ ಹಾಗೂ ತೌಬಾಲ್ ಜಿಲ್ಲೆಯಲ್ಲಿ ಸುಲಿಗೆ ಪ್ರಕರಣಗಳಲ್ಲಿ ತೊಡಗಿದ್ದ, ಮೂರು ನಿಷೇಧಿತ ಸಂಘಟನೆಗಳ ಐವರು ಉಗ್ರಗಾಮಿಗಳನ್ನು ಭದ್ರತಾ ಪಡೆಗಳು ಬಂಧಿಸಿವೆ.
ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಕಾಂಗ್ಲಿಪಾಕ್ ಕಮ್ಯುನಿಸ್ಟ್ ಪಾರ್ಟಿ (ಅಪುನ್ಬಾ ಸಿಟಿ ಮೈತೇಯಿ)ಗೆ ಸೇರಿದ ಮೂವರು ಸಕ್ರಿಯ ಸದಸ್ಯರನ್ನು ಭಾನುವಾರ ಬಂಧಿಸಲಾಗಿದೆ. ಇವರಲ್ಲಿ ಇಬ್ಬರು ಸುಲಿಗೆ ಹಣವನ್ನು ಸಂಗ್ರಹಿಸಲು ಹುಯಿಡ್ರೋಮ್ ಗ್ರಾಮದಿಂದ ಹೋಗುವಾಗ ಬಂಧಿಸಲಾಗಿದೆ. ಇವರು ನೀಡಿದ ಸುಳಿವು ಆಧರಿಸಿ, ಕೈರಂಗ್ ಮಾನಿಂಗ್ ಲೈಕೈ ಪ್ರದೇಶದಲ್ಲಿ ಮತ್ತೊಬ್ಬನನ್ನು ಬಂಧಿಸಲಾಯಿತು ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ನಿಷೇಧಿತ ಕಾಂಗ್ಲಿ ಯವೊಲ್ ಕನ್ನಾ ಲುಪ್ (ಎಸ್‌ಒಆರ್‌ಇಪಿಎ)ನ ಸದಸ್ಯನನ್ನು ತೌಬಾಲ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಕೆಸಿಪಿ (ಎಂಎಫ್‌ಎಲ್)ಗೆ ಸೇರಿದ ಉಗ್ರನನ್ನು ಇಂಫಾಲ್ ಪೂರ್ವ ಜಿಲ್ಲೆಯ ಎಶಿಂಗ್‌ಥೆಂಬಿ ಮಾಪಾನ್‌ನಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.