
ಪಿಟಿಐ
ಇಂಫಾಲ್: ನಿಷೇಧಿತ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ (ಕೆಸಿಪಿ) ವಿವಿಧ ಗುಂಪುಗಳಿಗೆ ಸೇರಿದ 8 ಮಂದಿ ಉಗ್ರರನ್ನು ಪೂರ್ವ ಇಂಫಾಲ್ ಹಾಗೂ ಪಶ್ಚಿಮ ಇಂಫಾಲ್ ಜಿಲ್ಲೆಗಳಲ್ಲಿ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
ಕೆಸಿಪಿಯ ಪೀಪಲ್ಸ್ ವಾರ್ ಗ್ರೂಪ್‌ನ ನಾಲ್ವರು ಉಗ್ರರನ್ನು ಪೂರ್ವ ಇಂಫಾಲ್‌ನ ಆ್ಯಂಡ್ರೊ ಲೀತಾನ್‌ಪೋಕ್ಪಿ ಎಂಬಲ್ಲಿ ಗುರುವಾರ ಬಂಧಿಸಲಾಗಿದೆ. ಬಂಧಿತರಿಂದ ಒಂದು .32 ಪಿಸ್ತೂಲ್ ಹಾಗೂ ಒಂದು ಮ್ಯಾಗಜಿನ್, ಮೂರು .32 ಜೀವಂತ ಗುಂಡು ಮತ್ತು ಎರಡು ರೇಡಿಯೊ ಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೆಸಿಪಿಯ ಮತ್ತೊಂದು ಘಟಕ ತೈಬಾಂಗಾನ್ಬಾದ ಮೂವರು ಉಗ್ರರನ್ನು ಪಶ್ಚಿಮ ಇಂಫಾಲ್‌ನ ಲ್ಯಾಂಗೋಲ್ ಗ್ರಾಮದಲ್ಲಿ ಬಂಧಿಸಲಾಗಿದೆ. ಇದೇ ಗ್ರಾಮದಲ್ಲಿ ಕೆಸಿಪಿಯ ಇಬುಂಗೊ ಘಟಕದ ಒಬ್ಬ ಸದಸ್ಯನನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.