ADVERTISEMENT

ಮಣಿಪುರ: ಮನೆಗಳಿಗೆ ಬೆಂಕಿ ಹಚ್ಚಿದ ಶಂಕಿತ ಉಗ್ರರು

ಪಿಟಿಐ
Published 26 ಜನವರಿ 2026, 16:02 IST
Last Updated 26 ಜನವರಿ 2026, 16:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂಫಾಲ್‌: ಶಂಕಿತ ಉಗ್ರರು ಸೋಮವಾರ ಮಧ್ಯಾಹ್ನ ಇಲ್ಲಿನ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಹಲವು ಮನೆ ಹಾಗೂ ಫಾರ್ಮ್‌ಹೌಸ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ರಾಜ್ಯದಲ್ಲಿ ಮತ್ತೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕುಕಿ ಸಮುದಾಯವು ಬಹುಸಂಖ್ಯಾತರಾಗಿರುವ ಕೆ.ಸೊಂಗುಲುಂಗ್ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಷ್ಟದ ಅಂದಾಜು ಇನ್ನಷ್ಟೇ ತಿಳಿಯಬೇಕಿದೆ. ಅಸ್ಸಾಂ ರೈಫಲ್ಸ್‌ ಸೇರಿದಂತೆ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ.

ADVERTISEMENT

ದಾಳಿಗೆ ಸಂಬಂಧಿಸಿದಂತೆ ಝೆಲಿಯಾಗ್ರೊಂಗ್‌ ಯುನೈಟೆಡ್‌ ಫ್ರಂಟ್‌ ಹೊಣೆ ಹೊತ್ತು ಹೊತ್ತುಕೊಂಡಿದೆ. ಮನೆ ಹಾಗೂ ಫಾರ್ಮ್‌ಹೌಸ್‌ಗಳನ್ನು ಗಸಗಸೆ ಅಕ್ರಮ ಬೆಳೆಗಾರರು ಬಳಸಿಕೊಳ್ಳುತ್ತಿದ್ದರು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.