ಮಣಿಪುರ
ನವದೆಹಲಿ: ಜನಾಂಗೀಯ ಹಿಂಸಾಚಾರದಿಂದ ಬಳಲಿರುವ ಮಣಿಪುರ ರಾಜ್ಯದಲ್ಲಿ 2023ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡದ (ಎಸ್.ಟಿ) ಜನರ ಮೇಲಿನ ದೌರ್ಜನ್ಯ ಪ್ರಕರಣ
ಶೇ 29ರಷ್ಟು ಏರಿಕೆಯಾಗಿದ್ದು, ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ.
ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳು ನಂತರದ ಸ್ಥಾನ ಗಳಲ್ಲಿವೆ. 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಗಳಲ್ಲಿ ಇಳಿಕೆ ದಾಖಲಾಗಿದ್ದರೆ, 10 ರಾಜ್ಯಗಳಲ್ಲಿ ಯಾವುದೇ ಪ್ರಕರಣಗಳ ವರದಿಯಾಗಿಲ್ಲ ಎಂದು ಸೋಮವಾರ ಬಿಡುಗಡೆ ಆಗಿರುವ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ (ಎನ್‌ಸಿಆರ್‌ಬಿ) 2023ರ ವರದಿ ಮಾಹಿತಿ ನಿಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.