ADVERTISEMENT

ಮಣಿಪುರ ಹಿಂಸಾಚಾರ | ಶಸ್ತ್ರಾಸ್ತ್ರ ಲೂಟಿ: 7 ಮಂದಿ ವಿರುದ್ಧ CBI ಚಾರ್ಜ್ ಶೀಟ್

ಪಿಟಿಐ
Published 3 ಮಾರ್ಚ್ 2024, 7:02 IST
Last Updated 3 ಮಾರ್ಚ್ 2024, 7:02 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ಕಳೆದ ವರ್ಷ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರ ಸಂದರ್ಭದಲ್ಲಿ ಬಿಷ್ಣುಪುರ ಪೊಲೀಸ್ ಶಸ್ತ್ರಾಗಾರದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಲೂಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಗುವಾಹಟಿಯ ಕಮ್ರೂಪ್ (ಮೆಟ್ರೊ)ನಲ್ಲಿರುವ ಜಿಲ್ಲಾ ಕ್ರಿಮಿನಲ್‌ ನ್ಯಾಯಾಲಯದಲ್ಲಿ ಸಿಬಿಐ ತನ್ನ ಚಾರ್ಜ್ ಶೀಟ್ ಸಲ್ಲಿಸಿದೆ.

ADVERTISEMENT

ಸಿಬಿಐ ಚಾರ್ಜ್ ಶೀಟ್‌ನಲ್ಲಿ ಹೆಸರಿಸಲಾದ ಆರೋಪಿಗಳೆಂದರೆ, ಲೈಶ್ರಾಮ್ ಪ್ರೇಮ್ ಸಿಂಗ್, ಖುಮುಚ್ಚಮ್ ಧೀರೆನ್, ಮೊಯರಂಗತೇಮ್ ಆನಂದ್ ಸಿಂಗ್, ಅಥೋಕ್‌ಪಂ ಕಾಜಿತ್ ಅಲಿಯಾಸ್ ಕಿಶೋರ್ಜಿತ್, ಲೌಕ್ರಕ್‌ಪಂ ಮೈಕೆಲ್ ಮಂಗ್ಯಾಂಗ್‌ಚಾ ಅಲಿಯಾಸ್ ಮೈಕೆಲ್, ಕೊಂತೌಜಮ್ ರೊಮೊಜಿತ್ ಮೈತೆ , ಅಲಿಯಾಸ್ ಜಾನ್‌ಸನ್, ಅಲಿಯಾಸ್ ರೊಮೊಜಿತ್ .

ಪ್ರಕರಣದ ಹಿನ್ನೆಲೆ:

ಕಳೆದ ವರ್ಷ ಆಗಸ್ಟ್ 3ರಂದು, ಬಿಷ್ಣುಪುರದ ನರನ್ಸೇನಾದಲ್ಲಿರುವ ಭಾರತೀಯ ಮೀಸಲು ಪಡೆಯ 2ನೇ ಪ್ರಧಾನ ಕಚೇರಿಯ 2 ಕೊಠಡಿಗಳಿಂದ 300 ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು, 19,800 ಸುತ್ತು ಮದ್ದುಗುಂಡುಗಳು ಮತ್ತು ಇತರ ಪರಿಕರಗಳನ್ನು ಲೂಟಿ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.