ಇಂಫಾಲ್/ಗುವಾಹಟಿ: ಮಣಿಪುರದ ಸೇನಾಪತಿ ಜಿಲ್ಲೆಯಲ್ಲಿ ಹೂವಿನ ಉತ್ಸವದ ವರದಿ ಮಾಡಲು ಹೋಗಿದ್ದ ಟಿವಿ ಪತ್ರಕರ್ತರೊಬ್ಬರ ಮೇಲೆ ಗುಂಡು ಹಾರಿಸಲಾಗಿದೆ.
ನಾಗಲ್ಯಾಂಡ್ ಮೂಲದ ಹಾರ್ನ್‌ಬಿಲ್ ಟಿವಿಯ ಪತ್ರಕರ್ತ ದೀಪ್ ಸೈಕಿಯಾ ಅವರ ಕಂಕುಳು ಮತ್ತು ಕಾಲುಗಳಿಗೆ ಗುಂಡೇಟಿನ ಗಾಯಗಳಾಗಿವೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ನಾಗಾ ಸಮುದಾಯವು ಪ್ರಾಬಲ್ಯವಿರುವ ಜಿಲ್ಲೆಯ ಲಾಯಿ ಗ್ರಾಮದಲ್ಲಿ ಶನಿವಾರ ಸಂಜೆ ಘಟನೆ ನಡೆದಿದ್ದು, ಸೈಕಿಯಾ ಅವರು ಜೀನಿಯಾ ಹೂವಿನ ಉತ್ಸವದಲ್ಲಿ ವರದಿ ಮಾಡುತ್ತಿದ್ದಾಗ ದಾಳಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯರು ಬಂದೂಕು ಸಮೇತ ದಾಳಿಕೋರನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ದಾಳಿ ಹಿಂದಿನ ಕಾರಣವೇನೆಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.