ADVERTISEMENT

ಮಣಿಪುರ: ಕುಕಿ– ಜೋನಲ್ಲಿ ಅರಣ್ಯ ಇಲಾಖೆ ಚಟುವಟಿಕೆಗೆ ನಿಷೇಧ

ಪಿಟಿಐ
Published 3 ಜುಲೈ 2025, 14:28 IST
Last Updated 3 ಜುಲೈ 2025, 14:28 IST
ಸಂಗ್ರಹ ಚಿತ್ರ 
ಸಂಗ್ರಹ ಚಿತ್ರ    

ಇಂಫಾಲ: ಮಣಿಪುರದ ಕಾಂಗ್‌ಪೋಕ್‌ಪಿ ಜಿಲ್ಲೆಯ ಕುಕಿ– ಜೋ ಪ್ರದೇಶದಲ್ಲಿ ರಾಜ್ಯ ಅರಣ್ಯ ಇಲಾಖೆಯ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಿರುವುದಾಗಿ ಸದರ್‌ ಹಿಲ್ಸ್‌ ಚೀಫ್ಸ್‌ ಅಸೋಸಿಯೇಷನ್‌ (ಎಸ್‌ಎಎಚ್‌ಐಎಲ್‌ಸಿಎ) ಘೋಷಿಸಿದೆ.  

ಈ ಕುರಿತು ಅಸೋಸಿಯೇಷನ್‌ ಬುಧವಾರ ಪ್ರಕಟಣೆ ಹೊರಡಿಸಿದ್ದು, ‘ರಾಜ್ಯದಲ್ಲಿನ ಸಂಘರ್ಷ ಕೊನೆಯಾಗುವವರೆಗೆ ಈ ನಿಷೇಧ ಮುಂದುವರಿಯಲಿದೆ’ ಎಂದು ತಿಳಿಸಿದೆ. 

ಜಿಲ್ಲಾಧಿಕಾರಿಗಳು ಸೇರಿದಂತೆ ಯಾವುದೇ ಅಧಿಕಾರಿಗಳು, ರಾಜ್ಯ ಸರ್ಕಾರದ ಕಾರ್ಯಕ್ರಮಗಳಾದ ‘ಬೆಟ್ಟಕ್ಕೆ ಹೋಗಿ’ ಹಾಗೂ ‘ಗ್ರಾಮಗಳಿಗೆ ತೆರಳಿ’ಯಂತಹ ಯೋಜನೆಗಳನ್ನು ಸ್ಥಳದಲ್ಲಿ ಹಮ್ಮಿಕೊಳ್ಳುವಂತಿಲ್ಲ ಎಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.