ADVERTISEMENT

ಮನಮೋಹನ್ ಸಿಂಗ್ ಆರೋಗ್ಯ ಸ್ಥಿರ

ಏಜೆನ್ಸೀಸ್
Published 11 ಮೇ 2020, 20:18 IST
Last Updated 11 ಮೇ 2020, 20:18 IST
ಮನಮೋಹನ್‌ ಸಿಂಗ್‌
ಮನಮೋಹನ್‌ ಸಿಂಗ್‌   

ನವದೆಹಲಿ (ಪಿಟಿಐ):ಮಾಜಿ ಪ‍್ರಧಾನಿ ಮನಮೋಹನ್‌ ಸಿಂಗ್‌ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಅವರಿಗೆ ಕೊರೊನಾ ಸೋಂಕು ಪತ್ತೆ ತಪಾಸಣೆ ನಡೆಸಲಾಗಿದ್ದು, ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ.ಔಷಧಿಯ ಅಡ್ಡಪರಿಣಾಮದಿಂದ ಜ್ವರದಿಂದ ಬಳಲುತ್ತಿದ್ದ ಅವರನ್ನು ಭಾನುವಾರ ರಾತ್ರಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್‌) ದಾಖಲಿಸಲಾಗಿತ್ತು.

ಜ್ವರ ಕಡಿಮೆಯಾಗಿದ್ದು ಅವರನ್ನು ಶೀಘ್ರ ಮನೆಗೆ ಕಳುಹಿಸಲಾಗುವುದು ಎಂದು ಏಮ್ಸ್‌ ತಿಳಿಸಿದೆ.

ADVERTISEMENT

ಹೃದ್ರೋಗ ಸಮಸ್ಯೆ ಕಾಣಿಸಿಕೊಂಡ ಕಾರಣ 87 ವರ್ಷ ವಯಸ್ಸಿನ ಸಿಂಗ್ ಅವರನ್ನು ಭಾನುವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿತ್ತು. ಹೃದ್ರೋಗ ತಜ್ಞ ಡಾ. ನಿತೀಶ್‌ ನಾಯ್ಕ್‌ ಅವರು ಸಿಂಗ್‌ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಸಿಂಗ್ ಅವರು 2009ರಲ್ಲಿ ಹೃದಯದ ಬೈಪಾಸ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.