ADVERTISEMENT

ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನೆ ಮಹತ್ವಪೂರ್ಣ ಕ್ಷಣ: ಮನಮೋಹನ್‌ ಸಿಂಗ್‌

ಪಿಟಿಐ
Published 10 ನವೆಂಬರ್ 2019, 20:13 IST
Last Updated 10 ನವೆಂಬರ್ 2019, 20:13 IST

ಕರ್ತಾರ್‌ಪುರ,ಪಾಕಿಸ್ತಾನ: ‘ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನೆಯು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧದಲ್ಲಿ ಮಹತ್ವಪೂರ್ಣ ಕ್ಷಣ’ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಶಿರೋಮಣಿ ಅಕಾಲಿ ದಳ ಮುಖಂಡ ಪ್ರಕಾಶ್‌ ಸಿಂಗ್‌ ಬಾದಲ್‌ ಮತ್ತಿತರರು ಬಣ್ಣಿಸಿದ್ದಾರೆ.

‘ಕಾರಿಡಾರ್‌ ಆರಂಭವಾಗಿರುವುದರಿಂದ ಎರಡು ದೇಶಗಳ ನಡುವಣ ಸಂಬಂಧ ಗಮನಾರ್ಹವಾಗಿ ಸುಧಾರಣೆಯಾಗಲಿದೆ‘ ಎಂದು ಮನಮೋಹನ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಪಂಜಾಬ್‌ನಲ್ಲಿ ‍ಪ್ರತ್ಯೇಕವಾದಕ್ಕೆ ಉತ್ತೇಜನ ನೀಡಲು ಕಾರಿಡಾರ್‌ ಬಳಕೆಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿರುವವರಿಗೆ ಸಿಖ್ ಧರ್ಮದ ಸಂಸ್ಥಾಪಕ ಗುರು ನಾನಕ್‌ ಅವರ ಮೇಲೆ ನಂಬಿಕೆ ಇಲ್ಲ’ ಎಂದು ಕೇಂದ್ರ ಸಚಿವೆ ಹರ್‌ಸಿಮ್ರತ್‌ ಕೌರ್‌ ಬಾದಲ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.