ADVERTISEMENT

ಅಮರನಾಥ ಯಾತ್ರೆ ವೇಳೆ ಸರಣಿ ಅಪಘಾತ: ಬಸ್‌ನಲ್ಲಿದ್ದ 36 ಮಂದಿಗೆ ಗಾಯ

ಪಿಟಿಐ
Published 5 ಜುಲೈ 2025, 6:06 IST
Last Updated 5 ಜುಲೈ 2025, 6:06 IST
<div class="paragraphs"><p>ಅಮರನಾಥ ಯಾತ್ರಿಕರು</p></div>

ಅಮರನಾಥ ಯಾತ್ರಿಕರು

   

ರಾಮಬನ್‌/ಜಮ್ಮು: ಅಮರನಾಥ ಯಾತ್ರಿಕರಿದ್ದ ಐದು ಬಸ್‌ಗಳು ರಾಮಬನ್‌ ಜಿಲ್ಲೆಯಲ್ಲಿ ಒಂದಕ್ಕೊಂದು ಡಿಕ್ಕಿಯಾದ ಪರಿಣಾಮ ಕನಿಷ್ಠ 36 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮುವಿನ ಭಗವತಿ ನಗರದಿಂದ ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ ಶಿಬಿರಕ್ಕೆ ತೆರಳುತ್ತಿದ್ದ ವೇಳೆ, ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಂದರ್‌ಕೂಟ್‌ ಬಳಿ ಬೆಳಿಗ್ಗೆ 8ರ ಸುಮಾರಿಗೆ ಅವಘಡ ಸಂಭವಿಸಿದೆ ಎಂದು ಹೇಳಿದ್ದಾರೆ.

ADVERTISEMENT

ಒಂದು ಬಸ್‌ನ ಬ್ರೇಕ್‌ ವೈಫಲ್ಯದಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

'ಬೆಂಗಾವಲಿನಲ್ಲಿದ್ದ ಕೊನೇ ಬಸ್‌, ನಿಯಂತ್ರಣ ಕಳೆದುಕೊಂಡು ಮುಂದೆ ಇದ್ದ ಬಸ್‌ಗಳಿಗೆ ಗುದ್ದಿದೆ. ಈ ವೇಳೆ 36 ಯಾತ್ರಿಕರು ಗಾಯಗೊಂಡಿದ್ದಾರೆ' ಎಂದು ರಾಮಬನ್‌ ಡಿಸಿಪಿ ಮೊಹಮ್ಮದ್‌ ಅಲ್ಯಾಸ್‌ ಖಾನ್ ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳು ಈಗಾಗಲೇ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.