ADVERTISEMENT

ಮಿಜೋರಾಂ: ಈ ವರ್ಷ 45 ಮಂದಿ ಡ್ರಗ್ಸ್‌ಗೆ ಬಲಿ

ಪಿಟಿಐ
Published 3 ಸೆಪ್ಟೆಂಬರ್ 2020, 8:07 IST
Last Updated 3 ಸೆಪ್ಟೆಂಬರ್ 2020, 8:07 IST
ಡ್ರಗ್ಸ್‌– ಸಾಂಕೇತಿಕ ಚಿತ್ರ
ಡ್ರಗ್ಸ್‌– ಸಾಂಕೇತಿಕ ಚಿತ್ರ   

ಐಜ್ವಾಲ್‌: ಈ ವರ್ಷ ಮಿಜೋರಾಂನಲ್ಲಿ ಮಾದಕ ವಸ್ತುಗಳ ವ್ಯಸನದಿಂದಾಗಿ ನಾಲ್ಕು ಮಹಿಳೆಯರು ಸೇರಿದಂತೆ ಒಟ್ಟು 45 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.

2019ರಲ್ಲಿ 13 ಮಹಿಳೆಯರು ಸೇರಿದಂತೆ 55 ಜನರು ಮಾದಕ ದ್ರವ್ಯಕ್ಕೆ ಬಲಿಯಾಗಿದ್ದರು. ಹೆರಾಯಿನ್‌ ಸೇರಿದಂತೆ ಹೆಚ್ಚಿನ ಮಾದಕ ದ್ರವ್ಯಗಳು ಮ್ಯಾನ್ಮಾರ್‌ನಿಂದ ಕಳ್ಳಸಾಗಣೆ ಮೂಲಕ ಬರುತ್ತಿವೆ ಎಂದು ಅಬಕಾರಿ ಮತ್ತು ಮಾದಕವಸ್ತು ಇಲಾಖೆಯ ಸಹಾಯಕ ಆಯುಕ್ತ ಪೀಟರ್‌ ಜ್ಹೋಮಿಂಗ್ಟಂಗಾ ಅವರು ಹೇಳಿದರು.

ಮಿಜೋರಾಂನಲ್ಲಿ1984ರಲ್ಲಿ ವ್ಯಕ್ತಿ ಡ್ರಗ್ಸ್‌ ಸೇವನೆಯಿಂದ ಮೃತಪಟ್ಟ ಪ್ರಕರಣ ವರದಿಯಾಗಿತ್ತು. ಇದಾದ ಬಳಿಕ ಮಿಜೋರಾಂನಲ್ಲಿ ಮಾದಕ ವಸ್ತುಗಳು ಬೇರೋರಿವೆ.ಇವುಗಳ ಸೇವನೆಯಿಂದ ಮೃತಪಟ್ಟವರಲ್ಲಿ ಶೇ 80ರಷ್ಟು ಜನರು ಹೆರಾಯಿನ್ ಗೀಳಿಗೆ ಒಳಗಾದವರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಇಲಾಖೆಯು ಸೋಮವಾರವಷ್ಟೇ 69 ಗ್ರಾಂ‌ ಹೆರಾಯಿನ್‌ ಅನ್ನು ವಶಕ್ಕೆ ಪಡೆದು, ನಾಲ್ವರನ್ನು ಬಂದಿಸಿತ್ತು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.