ADVERTISEMENT

ಒಡಿಶಾ | ದುರ್ಗಾಪೂಜೆ ವೇಳೆ ಮೊಬೈಲ್‌ ಫೋನ್‌ ಕಳ್ಳತನ: 26 ಮಂದಿ ಬಂಧನ

ಪಿಟಿಐ
Published 24 ಅಕ್ಟೋಬರ್ 2023, 9:18 IST
Last Updated 24 ಅಕ್ಟೋಬರ್ 2023, 9:18 IST
ಬಂಧನ (ಪ್ರಾತಿನಿಧಿಕ ಚಿತ್ರ)
ಬಂಧನ (ಪ್ರಾತಿನಿಧಿಕ ಚಿತ್ರ)   

ಭುವನೇಶ್ವರ್: ಒಡಿಶಾದ ಭುವನೇಶ್ವರ್‌ ನಗರದಲ್ಲಿ ದಸರಾ ಹಬ್ಬದ ಪ್ರಯುಕ್ತ ದುರ್ಗಾಪೂಜೆ ನಡೆಯುತ್ತಿದ್ದ ವೇಳೆ ಚಿನ್ನದ ಸರ, ಮೊಬೈಲ್‌ ಫೋನ್‌ ಸೇರಿದಂತೆ ಇತರೆ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ ಆರೋಪದಡಿ 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಭುವನೇಶ್ವರ್‌ನ ಸಹೀದ್ ನಗರ, ಖಂಡಗಿರಿ, ಮಂಚೇಶ್ವರ, ನಾಯಪಲ್ಲಿ ಮತ್ತು ಲಕ್ಷ್ಮೀಸಾಗರ ಎಂಬಲ್ಲಿ ವಿಶೇಷ ಪೂಜಾ ಮಂಟಪಗಳನ್ನು ನಿರ್ಮಿಸಿ, ದುರ್ಗಾ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪೊಲೀಸರು ಗಸ್ತು ತಿರುಗಿ, ಮಹಿಳೆಯರು ಸೇರಿದಂತೆ ಕಳ್ಳತನ ಮಾಡುತ್ತಿದ್ದ 26 ಮಂದಿಯನ್ನು ಬಂಧಿಸಿದ್ದಾರೆ ಎಂದು ನಗರದ ಡಿಸಿಪಿ ಕಚೇರಿ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಬಂಧಿತರಿಂದ 8 ಮೊಬೈಲ್‌ ಫೋನ್‌ ಹಾಗೂ ಏಳು ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ನಗರದಲ್ಲಿ ಅನೇಕ ಸರಗಳ್ಳತನ ಪ್ರಕರಣಗಳು ವರದಿಯಾದ ಬಳಿಕ ಕ್ರಮ ಕೈಗೊಳ್ಳಲಾಗಿದೆ. ಗುಂಪಿನಲ್ಲಿ ಜಾರ್ಖಂಡ್‌ ಮತ್ತು ಬಿಹಾರ್‌ನ ಹಲವಾರು ಮಂದಿ ಲೂಟಿ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.