ADVERTISEMENT

‘ಮಾಪ್ಪಿಳ ಪಾಟ್ಟ್’ ಕವಿ ವಿ.ಎಂ.ಕುಟ್ಟಿ ನಿಧನ

ಪಿಟಿಐ
Published 13 ಅಕ್ಟೋಬರ್ 2021, 8:13 IST
Last Updated 13 ಅಕ್ಟೋಬರ್ 2021, 8:13 IST
death
death   

ಕೋಯಿಕ್ಕೋಡ್‌: ಕೇರಳ ಮುಸ್ಲಿಮರಲ್ಲಿ ಹೆಚ್ಚು ಜನಪ್ರಿಯವಾಗಿರುವ ‘ಮಾಪ್ಪಿಳ ಪಾಟ್ಟ್‌’ ಎಂಬ ಗೀತೆಗಳ ರಚನೆಕಾರ ವಿ.ಎಂ.ಕುಟ್ಟಿ (86) ಅವರು ಹೃದಯಾಘಾತದಿಂದಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.

ಅವರು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ‘ಮಾಪ್ಪಿಳ ಪಟ್ಟಿಂಟೆ ಲೋಕಂ’, ‘ಭಕ್ತಿಗೀತಂಗಳ್’, ‘ಕುರುತ್ತಿಕುಂಜು’ ಹಾಗೂ ‘ಬಶೀರ್ ಮಾಲಾ’ ಅವರ ಇತರ ಹೆಸರಾಂತ ಕೃತಿಗಳು.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜರಾಗಿದ್ದ ಅವರು, ಇನ್ಸ್‌ಟಿಟ್ಯೂಟ್‌ ಆಫ್‌ ಮಾಪ್ಪಿಳ ಸ್ಟಡೀಸ್‌ನ ಗೌರವ ಕಾರ್ಯದರ್ಶಿಯಾಗಿ ಬಹುಕಾಲ ಸೇವೆ ಸಲ್ಲಿಸಿದ್ದರು.

ADVERTISEMENT

ಕೇರಳದ ಮಲಬಾರ್‌ನ ಮುಸ್ಲಿ ಸಮುದಾಯದಲ್ಲಿ ಜಾನಪದ ಶೈಲಿಯ ಈ ಗೀತೆಗಳನ್ನು ಹಾಡಲಾಗುತ್ತದೆ. ಈ ಹಾಡುಗಳನ್ನು ಸಂಗ್ರಹಿಸಿ, ಪ್ರಚುರ ಪಡಿಸುವಲ್ಲಿ ಕುಟ್ಟಿ ಅವರ ಕೊಡುಗೆ ಅನನ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.